“ರಾಮಕೃಷ್ಣ ವಿದ್ಯಾದೇಗುಲ”ಕ್ಕೆಭೂಮಿಪೂಜೆ
ಪೊಳಲಿ: ಬಂಟ್ಚಾಳ:ತಾಲೂಕಿನ ಪೊಳಲಿಯಲ್ಲಿರುವ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ಅವರ ಆಶಯದಂತೆ ತಾಲೂಕಿನ ಕರಿಯಂಗಳ ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿಯಲ್ಲಿ ಸುಮಾರು ೭೫ ಕೋ.ರೂ.ವೆಚ್ಚದಲ್ಲಿ “ರಾಮಕೃಷ್ಣ ವಿದ್ಯಾದೇಗುಲ”ಕ್ಕೆ ಜೂ.೧೬ರಂದು ಭಾನುವಾರ ಭೂಮಿಪೂಜೆ ನೆರೆವೇರಿತು.

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಅರ್ಚಕ ಅನಂತ ಭಟ್ ಭೂಮಿ ಪೂಜೆ ನೆರವೇರಿಸಿದರು.ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮಿಜಿಯವರ ಹಾಗೂ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಉಪಸ್ಥಿತಿಯಲ್ಲಿ



ರಾಮಕೃಷ್ಣ ವಿದ್ಯಾ ದೇಗುಲದ ಸಮಿತಿ ಸದಸ್ಯರಾದ ಮಂಜುನಾಥ್ ಪ್ರಭು, ಡಾ. ಜಯಕರ ಮಾರ್ಲ, ಚಂದ್ರಹಾಸ ಪಲ್ಲಿಪಾಡಿ ಏಕನಾಥ್ ಪ್ರಭು, ಸುದೇಶ್ ರೈ, ಪಿ.ವಿ ರೈ, ಶರುಣ್ ಅಂಚನ್,ಆರ್ಕಿಟೆಕ್ಟ್ ನರೇಶ್ ಪೂಂಜ ಹಾಗೂ ರಾಮಕೃಷ್ಣಪರಮಹಂಸರ ಭಕ್ತಾಧಿಗಳು, ಆಶ್ರಮವಾಸಿಗಳು,ಊರಿನ ಪ್ರಮುಖರು ಉಪಸ್ಥಿತರಿದ್ದರು.