Published On: Sun, Jun 16th, 2024

ಎಕ್ಕಾರ್ : ಯಕ್ಷ ಶಿಕ್ಷಣ ಕಾರ್ಯಕ್ರಮದ ಉದ್ಘಾಟನೆ ಯಕ್ಷಗಾನ ಅದ್ಭುತ ಕಲೆ : ಗಿರೀಶ್ ಶೆಟ್ಟಿ ಕಟೀಲು


ಬಜಪೆ: ಯಕ್ಷ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ಜೀವನ ಶಿಸ್ತಿನ ಅರಿವನ್ನು ಮೂಡಿಸುತ್ತದೆ. ಸಮಾಜ ಮುಖಿ ಚಿಂತನೆಯನ್ನು ಬಿತ್ತುತ್ತಾ ತಿಳುವಳಿಕೆಯನ್ನು ಹೆಚ್ಚಿಸುವ ಮಾಧ್ಯಮವಾಗಿ ಯಕ್ಷಗಾನವು ಒಂದು ರಮ್ಯ ಅದ್ಬುತ ಕಲೆ ಎಂದು ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ) ಕಟೀಲು -ಎಕ್ಕಾರು ಘಟಕದ ಆಧ್ಯಕ್ಷ ಗಿರೀಶ್ ಎಂ ಶೆಟ್ಟಿ ಕಟೀಲು ತಿಳಿಸಿದರು.

www.suddi9.com


ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಜೂನ್ 15, ಇಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ) ಮಂಗಳೂರು ಇದರ ವತಿಯಿಂದ ನಡೆಯುವ ಎರಡನೇ ವರ್ಷದ ಯಕ್ಷ ಶಿಕ್ಷಣ ಕಾರ್ಯಕ್ರಮದ ಉದ್ಘಾಟನೆ ಸಮಾರಂಭ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಎಕ್ಕಾರ್ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಿರೀಶ್ ಶೆಟ್ಟಿ ಅಧ್ಯಕ್ಷರು, ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ) ಕಟೀಲು ಎಕ್ಕಾರು ಘಟಕ ಇವರು ವಹಿಸಿದ್ದರು. ಯಕ್ಷ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣಕ್ಕೆ ಸಂಬಂಧಿಸಿ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸಲಾಯಿತು.

ವೇದಿಕೆಯಲ್ಲಿ ಸುದೀಪ್ ಅಮೀನ್ , ಎಕ್ಕಾರು ಘಟಕದ ಸಂಚಾಲಕರಾದ ಸತೀಶ್ ಶೆಟ್ಟಿ, ನಿತೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭರತೇಶ ಶೆಟ್ಟಿ , ವಿಕ್ರಮ್ ಮಾಡ ಸದಸ್ಯರು ಗ್ರಾಮ ಪಂಚಾಯತಿ, ಮುಖ್ಯೋಪಾಧ್ಯಾಯರಾದ ಇಂದಿರಾ ಎನ್ ರಾವ್, ನೋಡಲ್ ಶಿಕ್ಷಕರಾದ ಡಾ. ಅನಿತ್ ಕುಮಾರ್ ರಾಜೇಂದ್ರ ಪ್ರಸಾದ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.

ಘಟಕದ ಸಂಚಾಲಕರಾದ ನಿತೇಶ್ ಎಕ್ಕಾರು ಧನ್ಯವಾದ ಸಮರ್ಪಿಸಿದರು, ಶಿಕ್ಷಕಿ ಚಿತ್ರಾಶ್ರೀ ಕಾರ್ಯಕ್ರಮ ನಿರೂಪಿಸಿದರು, ಯಕ್ಷ ಶಿಕ್ಷಕರಾದ ರಾಮ್ ಪ್ರಕಾಶ್ ಕಲ್ಲೂರಾಯ ವಿದ್ಯಾರ್ಥಿಗಳಿಗೆ ಪ್ರಾರಂಭಿಕ ಹೆಜ್ಜೆಗಳನ್ನ ಕಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಹಿರಿಯ ಶಿಕ್ಷಕರಾದ ಪೂರ್ಣಿಮಾ ಎಚ್ಎಂ, ರಾಜಶ್ರೀ ಕೆ, ಶ್ರೀಮತಿ ವಿದ್ಯಾಲತಾ, ಶ್ರೀಮತಿ ವಿದ್ಯಾ ಗೌರಿ, ಶ್ರೀಮತಿ ರಮ್ಯಾ, ಶ್ರೀಮತಿ ಜಯಂತಿ, ಕುಮಾರಿ ನಿಶ್ಮಿತಾ ಹಾಗೂ ಪೋಷಕರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ದಕ್ಷಿಣ ಭಾರತ ವಲಯ ಮಟ್ಟದ ಕೋ ಕೋ ಪಂದ್ಯಾಟವು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾ ನಿಲಯ ವಿಜಯವಾಡ ಆಂಧ್ರಪ್ರದೇಶ ಇಲ್ಲಿ ನಡೆಯುವ ಕೋಕೋ ಪಂದ್ಯಾಟದಲ್ಲಿ ಪಾಲ್ಗೊಳ್ಳುವ 8 ಮಂದಿ ವಿದ್ಯಾರ್ಥಿಗಳನ್ನು ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾಲತಾ ಇವರಿಗೆ ಶುಭ ಹಾರೈಸಲಾಯಿತು. 130 ಮಂದಿ ಯಕ್ಷ ಶಿಕ್ಷಣದಲ್ಲಿ ಭಾಗವಹಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter