ರಾಷ್ಟ್ರೀಯತೆಯ ಗ್ಯಾರಂಟಿ ಎದುರು ಪುಕ್ಕಟೆ ಗ್ಯಾರಂಟಿಗೆ ಸೋಲು: ಪ್ರಭಾಕರ ಪ್ರಭು
ಬಂಟ್ವಾಳ: ದೇಶದಲ್ಲಿ ಇತ್ತೀಚಿಗೆ ನಡೆದ 5 ರಾಜ್ಯಗಳ ವಿಧಾನ ಸಭೆ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಡ್ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಜಯಭೇರಿಗಳಿಸುವುದರೊಂದಿಗೆ ರಾಷ್ಟ್ರೀಯತೆಯ ಗ್ಯಾರಂಟಿಗೆ ಮಹತ್ವ ನೀಡಿದ್ದಲ್ಲದೆ ಪ್ರಧಾನಿ ನರೇಂದ್ರ ಮೋದಿ ಯವರ ಮೇಲೆ ಅಪಾರವಾದ ನಂಬಿಕೆ ಇಟ್ಟಿರುವುದು ಸಾಬೀತಾಗಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ, ಬಿಜೆಪಿ ಮುಖಂಡ ಪ್ರಭಾಕರ ಪ್ರಭು ತಿಳಿಸಿದ್ದಾರೆ.

ದೇಶದ ಪ್ರಬುದ್ದ ಮತದಾರರು ಕಾಂಗ್ರೆಸ್ ಪಕ್ಷದ ಪುಕ್ಕಟೆ, ತಾತ್ಕಾಲಿಕ ಗ್ಯಾರಂಟಿ ಕಾಡ್೯ನ ಆಮಿಷಗಳಿಗೆ ಆಸೆ ಪಡದೆ ರಾಷ್ಟ್ರೀಯತೆಯ ಗ್ಯಾರಂಟಿಗೆ ಮಹತ್ವ ನೀಡಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಐದು ರಾಜ್ಯಗಳ ಚುನಾವಣೆಯಲ್ಲಿ ಭಾನುವಾರ ಪ್ರಕಟವಾದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಈ ಸೆಮಿಫೈನಲ್ ಪಂದ್ಯಾಟದ ಗೆಲುವು ಮುಂಬರುವ ಲೋಕಸಭೆ ಚುನಾವಣೆಯ ಫೈನಲ್ ಪಂದ್ಯಾಟಕ್ಕೆ ದಿಕ್ಸೂಚಿಯಾಗಲಿದ್ದು ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಪ್ರಭು ಭವಿಷ್ಯ ನುಡಿದಿದ್ದಾರೆ.