ಕಲ್ಲಡ್ಕ ಧ್ಯಾನಮಂದಿರದಲ್ಲಿ ಹುಟ್ಟುಹಬ್ಬ ಆಚರಣೆ ಭಜನಾ ಕಾರ್ಯಕ್ರಮ
ಬಂಟ್ವಾಳ: ಕಲ್ಲಡ್ಕ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಭಜನಾ ಕಾÀರ್ಯಕ್ರಮ ಹಾಗೂ ಮೇ- ಜೂನ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ವನ್ನು ಸಾಮೂಹಿಕ ಆಚರಿಸಲಾಯಿತು.

ಸೃಷ್ಟಿ ಕರ್ತನನ್ನು ಪೂಜಿಸಿ ಬಣ್ಣಿಸುವುದರಿಂದ ನಮ್ಮೋಳಗಿರುವ ಅಹಂನ್ನು ತೊರೆಯಲು ಸಾಧ್ಯ. ಜೀವನವನ್ನು ಕೊಟ್ಟಂತ ತಂದೆತಾಯಿ , ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ಗುರುಗಳನ್ನು ನೆನಪಿಸಿಕೊಳ್ಳುವ ಒಳ್ಳೆಯ ಸುದಿನ. ಹುಟ್ಟುಹಬ್ಬದ ದಿನವನ್ನು ಆಚರಿಸಿಕೊಳ್ಳುತ್ತಿರುವ ಮಕ್ಕಳಿಗೆ ಶುಭಹಾರೈಸುತ್ತ ಹುಟ್ಟುಹಬ್ಬ ಹಾಗೂ ಭಜನಾ ಕಾರ್ಯಕ್ರಮದ ಮಹತ್ವವನ್ನು ಶ್ರೀರಾಮ ಪದವಿ ವಿಭಾಗದ ಕನ್ನಡ ಉಪನ್ಯಾಸಕರಾದ ಯತಿರಾಜ್ ಮಕ್ಕಳಿಗೆ ತಿಳಿಸಿದರು.


ಕಾರ್ಯಕ್ರಮದಲ್ಲಿ ಮೊದಲಿಗೆ ತರಗತಿವಾರು ಭಜನಾ ಕಾರ್ಯಕ್ರಮ ನಡೆಯಿತು. ನಂತರ ಹುಟ್ಟುಹಬ್ಬ ಆಚರಿಸುವ ಮಕ್ಕಳಿಗೆ ಅಧ್ಯಾಪಕ ವೃಂದದವರು ಆರತಿ, ಅಕ್ಷತೆ, ತಿಲಕಧಾರಣೆ ಮಾಡಿ, ಸಿಹಿ ನೀಡಿದರು.
ವೇದಿಕೆಯಲ್ಲಿ ವಾರಣಾಸಿ ವೃಶಿಕೇಶ ಯೋಗಶ್ರಮದ ಯೋಗಗುರುಗಳಾದ ಶ್ರೀ ಪ್ರಕಾಶನಂದ ಹಾಗೂ ಸಹ ಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಎಮ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ವೈದೇಹಿ ಸ್ವಾಗತಿಸಿ, ವಂಶಿಕ ನಿರೂಪಿಸಿ, ವರ್ಷ ವಂದಿಸಿದರು.