ರಾಯಿ: ಶಾಲಾ ಪ್ರಾರಂಭೋತ್ಸವ ಪುಸ್ತಕ, ಬ್ಯಾಗ್, ಕೊಡೆ ವಿತರಣೆ
ಬಂಟ್ವಾಳ:ಇಲ್ಲಿನ ರಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ‘ಶಾಲಾ ಪ್ರಾರಂಭೋತ್ಸವ ‘ಕಾರ್ಯಕ್ರಮ ಶುಕ್ರವಾರ ನಡೆಯಿತು. ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಹೂವು ಮತ್ತು ಬೆಲೂನ್ ನೀಡಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಸಮವಸ್ತ್ರ, ಬ್ಯಾಗ್, ಕೊಡೆ ವಿತರಿಸಲಾಯಿತು.
ದಾನಿ ಮನೋಜ್ ಶೆಟ್ಟಿ ಹೊಕ್ಕಾಡಿಗೋಳಿ ಇವರು ಉಚಿತ ಪುಸ್ತಕ ಹಸ್ತಾಂತರಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಗೌಡ, ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹರೀಶ ಆಚಾರ್ಯ ರಾಯಿ, ಟ್ರಸ್ಟಿ ಮಧುಕರ ಬಂಗೇರ, ನಿವೃತ್ತ ಶಿಕ್ಷಕ ಸೋಮಪ್ಪ ಮಡಿವಾಳ, ಪ್ರಮುಖರಾದ ವಸಂತ ಗೌಡ ಮುದ್ದಾಜೆ, ಹೇಮಾ ಎಚ್.ರಾವ್, ಪ್ರವೀಣ ಅಂಚನ್ ಕೊಯಿಲ, ಮೋಹನ್ ಕೆ.ಶ್ರೀಯಾನ್ ರಾಯಿ, ಪದ್ಮನಾಭ ಕಲ್ಲೇರಿ, ಶಿಕ್ಷಕ ಸಿದ್ಧಪ್ಪ ಕಡೂರು ಮತ್ತಿತರರು ಇದ್ದರು.