ನಿವೃತ್ತ ಸಹಕಾರಿಗೆ ಬೀಳ್ಕೋಡುಗೆ ಡಿ.ಸಿ.ಸಿ.ನಿರ್ದೇಶಕರಿಗೆ ಅಭಿನಂದನೆ
ಬಂಟ್ವಾಳ: ರೈತರ ಸೇವಾ ಸಹಕಾರಿ ಸಂಘ ನಿ ಕಲ್ಲಡ್ಕ ಮತ್ತು ಪಾಣೆಮಂಗಳೂರು ಸಹಕಾರಿ ಸಂಘ ನಿ. ದಲ್ಲಿ ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿ 10 ವರ್ಷಗಳ ಕಾಲ ಮುಖ್ಯ ಕಾರ್ಯ ನಿರ್ವಹಣಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಸುರೇಶ್ .ಕೆ ಇವರಿಗೆ ಬೀಳ್ಕೋಡುಗೆ ಹಾಗೂ ಬಂಟ್ವಾಳ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪ್ರತಿನಿಧಿಯಾಗಿ ಪ್ರತಿಷ್ಠಿತ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗೆ ಸತತ ಆರನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾದ ಟಿ.ಜಿ. ರಾಜಾರಾಮ್ ಭಟ್ ಅವರಿಗೆ ಅಭಿನಂದನಾ ಸಮಾರಂಭ ಮುಖ್ಯ ಕಾರ್ಯನಿರ್ವಣಾಧಿಕಾರಿಗಳ ಒಕ್ಕೂಟದ ವತಿಯಿಂದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಬಿ.ಸಿ.ರೋಡು ಶಾಖೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಟಿ. ಜಿ. ರಾಜಾರಾಮ್ ಭಟ್ ವಹಿಸಿ ಮಾತನಾಡಿ, ಕಷ್ಟದ ಪರಿಸ್ಥಿತಿಯಲ್ಲಿದ್ದಾಗಲು ಸಂಘವನ್ನು ಮುನ್ನೆಡೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ಸಹಕಾರಿ ಸಂಘಗಳು ಅಭಿವೃದ್ಧಿ ಪಥದಲ್ಲಿ ಸಾಗಲು ಎಂದು ಹೇಳಿದರು.
ದ.ಕ ಸಹಕಾರಿ ಸಂಘಗಳ ಉಪನಿಬಂಧಕ ರಮೇಶ್ ಎಚ್ಎನ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಧೀರ್ ಕುಮಾರ್ ಜೆ, ಸಹಕಾರ ಅಭಿವೃದ್ಧಿ ಅಧಿಕಾರಿ ಗೋಪಾಲ ಎನ್.ಜೆ, ಡಿ.ಸಿ.ಸಿ ಬ್ಯಾಂಕ್ ಉಪ ಮಹಾಪ್ರಬಂಧಕಿ ಶರ್ಮಿಳಾ ಭಟ್,ಡಿ.ಸಿ.ಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಗಣೇಶ್ ಕಾರಂತ, ವಲಯ ಮೇಲ್ವಿಚಾರಕರುಗಳಾದ ಯೋಗೀಶ್ ಎಚ್ , ಕೀರ್ತಿರಾಜ್ ಹಾಗೂ ತಾಲೂಕಿನ ಎಲ್ಲಾ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಣಾಧಿಕಾರಿಗಳು ಉಪಸ್ಥಿತರಿದ್ದರು.
ಒಕ್ಕೂಟದ ಅಧ್ಯಕ್ಷ ಸುಧಾಕರ ಶೆಟ್ಟಿ ಸ್ವಾಗತಿಸಿ, ಒಕ್ಕೂಟದ ಉಪಾಧ್ಯಕ್ಷ ಅಲ್ಬೆರ್ಟ್ ಡಿ.ಸೋಜ ವಂದಿಸಿದರು. ಕಾರ್ಯದರ್ಶಿ ಈಶ್ವರ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.