Published On: Wed, Jun 5th, 2024

ಮಾನವ ಸಂಪನ್ಮೂಲ ಉತ್ತಮವಾಗಿ ಬೆಳೆದಾಗ ಭೂಮಿಯು ಸುಂದರವಾಗಲು ಸಾಧ್ಯ:ರವಿರಾಜ್

ಬಂಟ್ವಾಳ: ಪರಿಸರವು ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುವ ಹಾಗೂ ಆತನ ನಡವಳಿಕೆಯನ್ನು ಬಿಂಬಿಸುವ ಕೈಕನ್ನಡಿಯಂತೆ ವರ್ತಿಸುತ್ತದೆ ಎಲ್ಲಿಯವರೆಗೆ ಮನುಷ್ಯನು ಪರಿಸರಕ್ಕೆ ಸ್ನೇಹಿತನಾಗಿರುವನೋ ಅಲ್ಲಿಯವರೆಗೆ ಪರಿಸರವು ಆತನಿಗೆ ಸ್ನೇಹಿತನಂತೆ ವರ್ತಿಸಿರುತ್ತದೆ,ನಾವು ಪರಿಸರವನ್ನು ಪ್ರೀತಿಸಬೇಕು ಕಾಡು ಮಾನವ ಸಂಪನ್ಮೂಲವಾಗಿ ಉತ್ತಮವಾಗಿ ಬೆಳೆದಾಗ ಮಾತ್ರ ನಮ್ಮ ಭೂಮಿಯು ಸುಂದರವಾಗಲು ಸಾಧ್ಯ ಎಂದು  ಬಂಟ್ವಾಳ  ಉಪವಲಯ ಅರಣ್ಯಾಧಿಕಾರಿ ರವಿರಾಜ್  ಅಭಿಪ್ರಾಯ ಪಟ್ಟರು.


ವೀರಕಂಬ ಗ್ರಾಮದ ಮಜಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ಇದರ ಸಹಯೋಗದಲ್ಲಿ ನಡೆದ “ವಿಶ್ವ ಪರಿಸರ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


 ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯದ ಮಂಜುನಾಥನ್ ರವರು ಶಾಲಾ ಆವರಣದಲ್ಲಿ ಹಣ್ಣಿನ ಗಿಡವನ್ನು ನೆಟ್ಟು ಪರಿಸರ ದಿನಾಚರಣೆಗೆ ಚಾಲನೆಯನ್ನು ನೀಡಿ, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವವಾಗಿದೆ ಎಂದು ತಿಳಿಸಿದರು.         
, ಸಂಪನ್ಮೂಲ ವ್ಯಕ್ತಿಯಾಗಿದ್ದ ಪತ್ರಕರ್ತ ಸಂದೀಪ್ ಸಾಲಿಯಾನ್  ಅವರು ಶಾಲೆಯಲ್ಲಿ ತರಗತಿ ಕೋಣೆಗಳಲ್ಲಿ ಹಾಗೂ ಮನೆಯಲ್ಲಿ ಕಸವನ್ನು  ನಿರ್ವಹಣೆ ಮಾಡುವ ವಿಧಾನ ಹಾಗೂ ಹಸಿ ಕಸ ಒಣ ಕಸ ಅಪಾಯಕಾರಿ ಕಸ ಮುಂತಾಗಿ ವಿಲೇವಾರಿ ಮಾಡುವ ವಿಧಾನಗಳು ನಿರುಪಯುಕ್ತ ಎಂದು ಬಿಸಾಡಿದ ಹಲವಾರು ವಸ್ತುಗಳಿಂದ ಕಸದಿಂದ ರಸ ತಯಾರಿಸುವ ವಿಧಾನವನ್ನು ತಿಳಿಸಿದರು.


ಪರಿಸರಕ್ಕೆ ಬೇಡವಾದ ವಸ್ತುಗಳನ್ನು ಮನೆಯಲ್ಲಿ ಯಾವ ರೀತಿ ಅಲಂಕಾರಿಕ ವಸ್ತುಗಳನ್ನಾಗಿ ಬಳಸಬಹುದು ಎಂದು ಪ್ರದರ್ಶಿಸಿದರು, ಉಪಯೋಗಿಸಿ ಬಿಸಾಡಿದ ಪ್ಲಾಸ್ಟಿಕ್ ಗಳನ್ನು  ಬಾಟಲಿಗಳಲ್ಲಿ ತುಂಬಿಸಿ ಅವುಗಳನ್ನು ಕಲ್ಲುಗಳ ಮಾದರಿಯಲ್ಲಿ ಬಳಸುವ ವಿಧಾನವನ್ನು ಪ್ರಾತ್ಯಕ್ಷವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.                

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ  ಕೊರಗಪ್ಪ ನಾಯ್ಕ್ ರವರು ವಹಿಸಿದ್ದರು..
ಈ ಸಂದರ್ಭದಲ್ಲಿ 2022 -23ನೇ ಸಾಲಿನಲ್ಲಿ ಶಾಲೆಯಲ್ಲಿ ನಡೆದ ಮನೆಗೊಂದು ಗಿಡ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯಿಂದ ಶಾಲಾ ಪ್ರತಿ ಮಗುವಿಗೆ  ನೀಡಿದ ಗಿಡಗಳನ್ನು ಇದುವರೆಗೂ ಬೆಳೆಸಿ ಕಾಪಾಡಿದ ಮಕ್ಕಳನ್ನು ಗುರುತಿಸಿ ಅಭಿನಂದಿಸಲಾಯಿತು.
ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ದಿನಾಚರಣೆ ಕುರಿತು ತರಗತಿ ವಾರು ಪರಿಸರಕ್ಕೆ ಸಂಬಂಧಪಟ್ಟ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ  ಬಹುಮಾನವನ್ನು ಹಂಚಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕು  ಯೋಜನಾಧಿಕಾರಿ ರಮೇಶ್  ,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ  ಯೋಜನಾಧಿಕಾರಿ  ಗಣೇಶ್ ಆಚಾರ್ಯ,ಜನಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ನಿತೇಶ್ ಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ಇದರ ಅಧ್ಯಕ್ಷರಾದ  ಮಾಧವ ಸಾಲಿಯಾನ್ ಕುದ್ರೆಬೆಟ್ಟು, ಯೋಜನೆಯ  ಕಲ್ಲಡ್ಕ ವಲಯದ ಅಧ್ಯಕ್ಷರಾದ  ತುಳಸಿ, ವೇದಿಕೆಯಲ್ಲಿ.ಉಪಸ್ಥಿತರಿದ್ದರು               ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ  ತಂಡದ ಸದಸ್ಯರುಗಳು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು, ಶಾಲಾ ಮಕ್ಕಳು ಭಾಗವಹಿಸಿದ್ದರು. 
ಶಾಲಾ ವಿದ್ಯಾರ್ಥಿಗಳು ಪರಿಸರ ಗೀತೆಯ ಪ್ರಾರ್ಥಿಸಿದರು,ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ  ಸ್ವಾಗತಿಸಿದರು, ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕರಾದ ಸುಗುಣ ಶೆಟ್ಟಿವಂದಿಸಿದರು , ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರೂಪಿಸಿದರು.  ಶಾಲಾ ಶಿಕ್ಷಕಿಯರು ಸಹಕರಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter