ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳಿಂದ ಸ್ಪೀಕರ್ ಗೆ ಮನವಿ
ಬಂಟ್ವಾಳ: ಇಂದಿರಾ ಕ್ಯಾಂಟಿನ್ ಸಿಬ್ಬಂದಿಗಳಿಗೆ ಯಾವುದೇ ರೀತಿಯ ಜೀವನ ಭದ್ರತೆಗಳು ಇಲ್ಲ,ಸರಕಾರ ಈ ಬಗ್ಗೆ ಕ್ರಮವಹಿಸುವಂತೆ ಆಗ್ರಹಿಸಿ ಬಿ.ಸಿ.ರೋಡಿನ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದರು.
ಬಿ.ಸಿ.ರೋಡಿನಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಅಗಮಿಸಿದ್ದ ವೇಳೆ ಸ್ಪೀಕರ್ ಅವರನ್ನು ಭೇಟಿಯಾದ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳು ಕರೋನಾ ಸಂದರ್ಭದಲ್ಲಿ ಇಡೀ ರಾಜ್ಯದ ಇಂದಿರಾ ಕ್ಯಾಂಟೀನ್ ನೌಕರರು ರಜೆ ಪಡೆಯದೆ ಬಡ ಜನರ ಸೇವೆ ಮಾಡಿರುತ್ತೇವೆ. ಆದರೆ ನಮ್ಮನ್ನು ಎಲ್ಲಿಯೂ ಗುರುತಿಸಿಲ್ಲ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮಾಡಿರುವ ಈ ಇಂದಿರಾ ಕ್ಯಾಂಟೀನ್ ಅದೆಷ್ಟೋ ಬಡವರಿಗೆ ಹಸಿವು ನೀಗಿಸುವ ಉತ್ತಮ ಯೋಜನೆಯಾಗಿದೆ. ನಾವು ಬಡವರಾಗಿರುವುದರಿಂದ ನಮಗೂ ಕೂಡಾ ಭದ್ರತೆ ನೀಡಬೇಕಾಗಿದೆ. ಇದರಿಂದ ರಾಜ್ಯದ ಇಂದಿರಾ ಕ್ಯಾಂಟಿನ್ ನೌಕರರು ಕಷ್ಟದಿಂದ ಪಾರಾದಂತಾಗುತ್ತದೆ. ಈ ಬಗ್ಗೆ ತಾವುಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇಂದಿರಾ ಕ್ಯಾಂಟೀನ್ ನೌಕರರಾದ ಜಯ ಪೂಜಾರಿ, ಆನಂದ ಪೂಜಾರಿ, ಅಬ್ದುಲ್ ರಝಾಕ್, ಚಂದ್ರಾವತಿ ಹಾಜರಿದ್ದರು.