ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ವಸ್ತು ಸಂಗ್ರಹಾಲಯಕ್ಕೆ ಭೇಟಿ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಮಾನವಿಕ ಸಂಘದ ವತಿಯಿಂದ ವಿದ್ಯಾರ್ಥಿಗಳು ಬಿ.ಸಿ.ರೋಡಿನ ಸಂಚಯ ಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದರು.
ಕೇಂದ್ರದ ಸಂಸ್ಥಾಪಕರಾದ ಪ್ರೊ. ತುಕಾರಾಂ ಪೂಜಾರಿ ಅವರು ರಾಣಿ ಅಬ್ಬಕ್ಕನ ಕುರಿತಾದ ವರ್ಣಚಿತ್ರಗಳು, ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಪರಿಕರ -ಪುಸ್ತಕಗಳು ಮತ್ತು ಹಳೆಯ ನಾಣ್ಯಗಳ ಕುರಿತ ಹಿನ್ನೆಲೆಯನ್ನು ತಿಳಿಸಿದರು.
ಮನುಷ್ಯ ನಿರ್ಮಿತ ಭೌತಿಕ ವಸ್ತುಗಳೆಲ್ಲವೂ ಗತಕಾಲದ ಜೀವನಕ್ರಮ ಮತ್ತು ಸಂಸ್ಕೃತಿಯನ್ನು ನಮಗೆ ಪರಿಚಯಿಸಿದರೆ, ಬದಲಾದ ಇಂದಿನ ಜೀವನ ಶೈಲಿ ಹಾಗೂ ಮುಂದೆ ಎದುರಾಗಲಿರುವ ಆಪತ್ತಿನ ಬಗ್ಗೆಯೂ ಸೂಚ್ಯವಾಗಿ ಅದು ನಮಗೆ ತಿಳಿಸಿಕೊಡುತ್ತದೆ ಎಂದು ಪ್ರೊ. ತುಕಾರಾಂ ಪೂಜಾರಿ ಈ ಸಂದರ್ಭ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಒಟ್ಟು ೩೨ ವಿದ್ಯಾರ್ಥಿಗಳು ಉಪನ್ಯಾಸಕರಾದ ಗಂಧರ್ವ, ಜಯಲಕ್ಷ್ಮಿ, ಸಂಧ್ಯಾ, ಪ್ರಸನ್ನ ಹಾಗೂ ಸಹನಾ ಉಪಸ್ಥಿತರಿದ್ದರು.