ದಿ. ಕೆ ಸೇಸಪ್ಪ ಕೋಟ್ಯಾನ್ ಸ್ಮರಣಾರ್ಥ ಸ್ಮಾರಕ ವೃತ್ತದ ಲೋಕಾರ್ಪಣೆ ಮತ್ತು ಪುತ್ಥಳಿ ಅನಾವರಣ ಕಾರ್ಯಕ್ರಮ
ಕೈಕಂಬ: ಕೊಡುಗೈದಾನಿ ಪಚ್ಚಿನಡ್ಕ ದಿ. ಕೆ ಸೇಸಪ್ಪ ಕೋಟ್ಯಾನ್ ರವರ ಸವಿ ನೆನಪಿಗಾಗಿ ಕಲ್ಪನೆ ಜಂಕ್ಷನ್ ನಲ್ಲಿ ನಿರ್ಮಿಸಿದ ಸ್ಮಾರಕ ವೃತ್ತದ ಲೋಕಾರ್ಪಣೆ ಮತ್ತು ಪುತ್ಥಳಿ ಅನಾವರಣ ಕಾರ್ಯಕ್ರಮವು ಮಾ.24ರಂದು ಭಾನುವಾರ ಕಲ್ಪನೆ ಜಂಕ್ಷನ್ ನಲ್ಲಿ ನಡೆಯಲಿರುವುದು.

ಪಚ್ಚಿನಡ್ಕ ದಿ. ಸೇಸಪ್ಪ ಕೋಟ್ಯಾನ್ ಸ್ಮಾರಕ ವೃತ್ತಾ ನಿರ್ಮಾಣ ಸಮಿತಿ ಬಂಟ್ವಾಳ ತಾಲೂಕು ಇದರ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಎಲ್ಲರನ್ನು ಭಾಗವಹಿಸುವಂತೆ ವಿನಂತಿಸಿಕೊಂಡಿದ್ದಾರೆ.