ಇಂದು ವಿಶ್ವ ಏಡ್ಸ್ ದಿನ
ಇಂದಿನ ಕಾಲದಲ್ಲಿ ಎಚ್ ಐ ವಿ ರೋಗದ ಬಗ್ಗೆ ಜಾಗೃತಿ ಮೂಡಿದೆ ಎಂದು ಹೇಳಲಾಗುತ್ತಿದ್ದರೂ, ಏಡ್ಸ್ ಹಬ್ಬುವುದು ಮಾತ್ರ ಕಡಿಮೆಯಾಗುವುದಿಲ್ಲ. ಯಾಕೆಂದರೆ ಇತ್ತೀಚೆಗೆ ಮನುಷ್ಯ ವೇಶ್ಯೆಯರೊಂದಿಗೆ ಸಂಬೋಗಿಸಿಯೇ ಏಡ್ಸ್ ಹರಡುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಇತ್ತೀಚೆಗೆ ಏಡ್ಸ್ ಬಗ್ಗೆ ವೇಶ್ಯೆಯರಿಗೂ ಜಾಗೃತಿ ಮೂಡಿದೆ ಎಂದು ಹೆಳಲಾಗುತ್ತದೆ. ಪುರುಷನ ಅಥವಾ ತನ್ನ ಗುಹ್ಯ ರೋಗ ಜನನಾಂಗದ ಮೂಲಕ ಹರಡದಂತೆ ವೇಶ್ಯೆ ಮುಂಚಿತವಾಗಿಯೇ ಕಾಂಡಮ್ ಧರಿಸಿ ರತಿಕ್ರೀಡೆಗೆ ಅನುವಾಗುತ್ತಾಳೆ. ಈ ಬಗ್ಗೆ ವೇಶ್ಯೆಯರೊಂದಿಗೆ ಸಂಬಂಧವಿರಿಸಿಕೊಂಡವರು ವೈದ್ಯರಿಗೆ ಮಾಹಿತಿ ನೀಡುತ್ತಾರೆ.

HIV or AIDS virus

ಮುಖ್ಯವಾಗಿ ಎಚ್ ಐ ವಿ ಜನನಾಂಗದ ಮೂಲಕವೇ ಹರಡುವುದರಿಂದ ಇಂದಿಗೂ ಏಡ್ಸ್ ಕಮ್ಮಿಯಾಗಿದೆ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಆಧುನಿಕತೆ ಬೆಳೆದಂತೆ ಮನುಷ್ಯ ಸೆಕ್ಸ್ ಮಾಡುವುದರಲ್ಲೂ ವೈವಿಧ್ಯತೆ ಕಂಡುಕೊಂಡಿದ್ದಾನೆ. ಇದರಿಂದಾಗಿ ಅನ್ಯಾಯವಾಗಿ ಏಡ್ಸ್ ರೋಗಕ್ಕೆ ಬಲಿಯಾಗುತ್ತಾನೆ. ತನ್ನ ಪತ್ನಿಯನ್ನು ಅದಲುಬದಲು ಮಾಡುವುದು, ಗ್ರೂಫ್ ಸೆಕ್ಸ್ ಮಾಡುವುದು, ಅನೈಸರ್ಗಿಕ ರೀತಿಯ ಸಂಬೋಗ ಇತ್ಯಾದಿ ಅತಿರೇಕದ ವರ್ತನೆಯಿಂದ ಮನುಷ್ಯ ಏಡ್ಸ್ನಂಥಾ ಮಹಾಮಾರಿಗೆ ಬಲಿಯಾಗುತ್ತಾನೆ. ಇತ್ತೀಚಿನ ದಿನ ಇಂಟೆರ್ನೆಟ್ ಯುಗ. ತನ್ನ ಕಾಮಪೇಕ್ಷೆಯನ್ನು ಮುಕ್ತವಾಗಿ ಯಾರೊಂದಿಗೂ ಬೇಕಾದರೂ ಚರ್ಸಿಸುವ ಕಾಲ ಬಂದಿದೆ. ಬೇಕಾದಷ್ಟು ಪೋರ್ನ್ ವೆಬ್ಸೇಟ್ಗಳಿವೆ. ಹೈಟೆಕ್ ವೇಶ್ಯಾವಾಟಿಕೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ. ಇದಕ್ಕೆ ಅತಿಯಾಗಿ ಮುಗ್ಧರೇ ಅನ್ಯಾಯವಾಗಿ ಬಲಿಯಾಗುವುದರಿಂದ ಗುಟ್ಟಿನಲ್ಲೇ ಏಡ್ಸ್, ಹೆಪಟೈಟಿಸ್ ಬಿನಂಥಾ ಗುಹ್ಯ ರೋಗಗಳು ಹರಡುತ್ತಲೇ ಇದೆ.

ಲೇಡೀಸ್ ಕಾಂಡಮ್ ಬಗ್ಗೆ ಜಾಗೃತಿ ಮೂಡಿಲ್ಲ:
ನಾವು ಇಂದಿನ ಆಧುನಿಕ ಯುಗದಲ್ಲಿದ್ದರೂ ನಮಗೆ ಲೇಡೀಸ್ ಕಾಂಡಮ್ ಬಗ್ಗೆ ಇನ್ನೂ ಜಾಗೃತಿ ಮೂಡಿಲ್ಲ. ಮಹಿಳೆಯರಂತೂ ಈ ಬಗ್ಗೆ ಅನಾಸಕ್ತಿ ತಾಳುತ್ತಿದ್ದಾರೆ. ಲೇಡೀಸ್ ಕಾಂಡಮ್ ಎಂಬುದು ಪುರುಷ ಕಾಂಡಮ್ನಂತೇ ಚೀಲದಂಥಾ ರಚನೆ. ಆದರೆ ಇದರ ತುದಿ ಸ್ವಲ್ಪ ದಪ್ಪವಾಗಿದ್ದು ಅದು ಸ್ತ್ರೀಯ ಜನನಾಂಗದಲ್ಲಿ ಕುಳಿತುಕೊಳ್ಳಲು ಸಹಾಯವಾಗುತ್ತದೆ. ಅದರ ಇನ್ನೊಂದು ಬದಿ ಜನನಾಂಗದ ಹೊರಭಾಗದಲ್ಲಿರುತ್ತದೆ. ಇದನ್ನು ಮಹಿಳೆಯರು ತನಗೆ ತಾನೇ ಅಳವಡಿಸಿಕೊಳ್ಳಬಹುದು. ಇದರಿಂದ ಏಡ್ಸ್ ಹರಡದಂತೆ ಸಹಾಯವಾಗುತ್ತದೆ. ಈ ಬಗ್ಗೆ ಲೈಂಗಿಕ ಕಾರ್ಯಕರ್ತರು, ಮಹಿಳಾ ಸಂಘಟನೆಯವರು ಜಾಗೃತಿ ಮೂಡಿಸಬೇಕಿತ್ತು. ಆದರೆ ಮಾಡಿಸಿಲ್ಲ ಎಂಬುದೇ ಬೇಸರದ ಮಾತು.

aids1

ಏಡ್ಸ್ ಹೇಗೆ ಹರಡುತ್ತದೆ?
ಒಳ ಮತ್ತು ಹೊರ ಜನನೇಂದ್ರಿಯಗಳಿಗೆ ಸೋಂಕು ಉಂಟಾದರೆ ಅದು ಎಚ್ ಐ ವಿ ಗೆ ತಿರುಗುವುದಿಲ್ಲ. ಆದರೆ ಅಂಥಹ ಮಹಿಳೆಯರು ಎಚ್ ಐ ವಿ ಪೀಡಿತ ಪುರುಷನೊಂದಿಗೆ ಸಂಭೋಗ ಮಾಡಿದರೆ ಬಹಳ ಸುಲಭವಾಗಿ ಎಚ್ ಐ ವಿ ಹಬ್ಬುತ್ತದೆ.
1. ದೈಹಿಕ ಸಂಪರ್ಕದಿಂದ (ಲೈಂಗಿಕ ಸಂಪರ್ಕ)
2. ಸಂಸ್ಕರಿಸದ ಸೂಜಿ ಮತ್ತು ಸಿರಿಂಜ್ಗಳ ಬಳಕೆಯಿಂದ.
3. ರೋಗ ಇರುವ ವ್ಯಕ್ತಿಯಿಂದ ರಕ್ತ ತೆಗೆದುಕೊಳ್ಳುವುದರಿಂದ ಬಹು ಬೇಗನೆ ಹರಡುತ್ತದೆ.
1. ಲೈಂಗಿಕ ಸಂಪರ್ಕದಿಂದ: ಸಲಿಂಗಕಾಮಿಗಳು, ವಿಕೃತಕಾಮಿಗಳು, ಹಲವಾರು ಜನರೊಡನೆ ದೈಹಿಕ ಸಂಪರ್ಕವಿರುವವರು, ವೇಶ್ಯೆಯರು ಇವರಲ್ಲಿ ಮತ್ತು ಇವರಿಂದ ಏಡ್ಸ್ ರೋಗವು ಕಾಣಿಸಿಕೊಳ್ಳುತ್ತದೆ ಮತ್ತು ಬಹು ಬೇಗನೆ ಹರಡುತ್ತದೆ.
2. ರಕ್ತದಿಂದ:  ರೋಗಾಣು ಇರುವವರು ಇತರರಿಗೆ ರಕ್ತ ನೀಡುವುದರಿಂದ ರೋಗ ಹರಡುತ್ತದೆ.
3. ಸಂಸ್ಕರಿಸದ ಸೂಜಿ ಮತ್ತು ಸಿರಿಂಜ್ನಿಂದ: ರೋಗ ಇರುವವರಿಗೆ ಚುಚ್ಚಿದ ಸೂಜಿಯಿಂದಲೇ ಇತರರಿಗೆ ಚುಚ್ಚಿದರೆ ಸುಲಭವಾಗಿ ರೋಗಾಣು ಬೇರೆ ವ್ಯಕ್ತಿಯ ದೇಹದೊಳಗೆ ಪ್ರವೇಶಿಸುತ್ತದೆ. ಇದೇ ರೀತಿ ಶಸ್ತ್ರ ಚಿಕಿತ್ಸಾ ಶಿಬಿರಗಳಲ್ಲಿ ಒಂದೇ ದಿನ ಹಲವಾರು ಶಸ್ತ್ರ ಚಿಕಿತ್ಸೆಗಳನ್ನು ಮಾಡುವಾಗ ಶಸ್ತ್ರ ಚಿಕಿತ್ಸಾ ಉಪಕರಣಗಳನ್ನು ಸರಿಯಾಗಿ ಸಂಸ್ಕರಿಸದೆ ಒಬ್ಬರಾದ ಮೇಲೆ ಒಬ್ಬರಿಗೆ ಬಳಸುವುದರಿಂದಲೂ ಏಡ್ಸ್ ಹರಡುವ ಸಾಧ್ಯತೆ ಇದೆ.
4. ಕ್ಷೌರಿಕರಿಂದ: ಕ್ಷೌರ ಮಾಡಿಸಿಕೊಳ್ಳಲು ಅಂಗಡಿಗೆ ಹೋದಾಗ ಏಡ್ಸ್ ರೋಗವಿರುವ ವ್ಯಕ್ತಿಗೆ ಬಳಸಿದ ಬ್ಲೇಡ್, ಚಾಕುವಿನಿಂದ ಬೇರೆಯವರಿಗೂ ಅದೇ ಬ್ಲೇಡ್ ಚಾಕು ಬಳಸಿದಾಗ ಏಡ್ಸ್ ಕಾಯಿಲೆ ಹರಡುವ ಸಾಧ್ಯತೆ ಇರುತ್ತದೆ. ರೋಗ ಹರಡಲು ತೆಗೆದುಕೊಳುವ ಸಮಯ: ವೈರಾಣು ತಗುಲಿದ ವ್ಯಕ್ತಿಯಲ್ಲಿ ಖಾಯಿಲೆಯ ಲಕ್ಷಣಗಳು ಕಾಣಲು 9 ರಿಂದ 10 ವರ್ಷಗಳು ಬೇಕಾಗುತ್ತದೆ. ಒಮ್ಮೆ ಏಡ್ಸ್ ಖಾಯಿಲೆಯ ಲಕ್ಷಣಗಳು ಕಂಡು ಬಂದರೆ ಚಿಕಿತ್ಸೆ ತಗೆದುಕೊಳ್ಳದಿದ್ದರೆ, ಸಾವು ಬೇಗನೆ ಬರುತ್ತದೆ. ಇಂಥಹ ವ್ಯಕ್ತಿಯು ಕೇವಲ 9 ತಿಂಗಳು (ಸರಾಸರಿ) ಬದುಕಬಹುದು.
hiv
ತಾಯಿಯಿಂದ ಮಗುವಿಗೆ ಸೋಂಕು ಹರಡುವುದು: ಗರ್ಭವಸ್ಥೆಯಲ್ಲಿ ಗಭರ್ಿಣಿ ತಾಯಿಯಿಂದ ಮಗುವಿಗೆ ಸೋಂಕು ತಗಲುವ ಅಪಾಯ ಶೇ.15 ರಿಂದ 50 ರಷ್ಟು ಇರುತ್ತದೆ.
1) ಗರ್ಭ ಧರಿಸಿದ ಮೇಲೆ ಸೋಂಕು ಪ್ಲಾಸೆಂಟಾದ ಮುಲಕ ತಗಲುವ ಸಾಧ್ಯತೆ ಇರುತ್ತದೆ.

2) ಹೆರಿಗೆಯ ಸಮಯದಲ್ಲಿ ಅದರಲ್ಲೂ ವಿಶೇಷವಾಗಿ ಸಹಜ ಹೆರಿಗೆಯ ಸಮಯದಲ್ಲಾಗುವ ರಕ್ತ ಸ್ರಾವದ ಮುಲಕ ಮಗುವಿಗೆ ಸೋಂಕು ತಗಲುವ ಅಪಾಯವಿರುತ್ತದೆ.

ತಾಯಿಗೆ ಯಾವ ಪ್ರಮಾಣದಲ್ಲಿ ಸೋಂಕು ಇರುತ್ತದೆಯೋ ಅಷ್ಟೆ ತೀವ್ರವಾಗಿ ಮಗುವಿಗೂ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಪ್ರಾರಂಭಿಕ ಹಂತದಲ್ಲಿ ಸೋಂಕಿಗೆ ಶೇ. 12 ರಷ್ಟು ಶಿಶುಗಳು ಬಲಿಯಾದರೆ, ಕೊನೆಯ ಹಂತದಲ್ಲಿ ಶೇ. 100 ರಷ್ಟು ಬಲಿಯಾಗುತ್ತವೆ.
ಹೆರಿಗೆಯ ನಂತರ: ಶಿಶು ಜನನದ ನಂತರ ಸ್ತನ್ಯಪಾನದ (ಎದೆ ಹಾಲಿನ) ಮುಲಕ ಊ..ಗಿ. ಸೋಂಕು ಮಗುವಿಗೆ ಹರಡುವ ಸಾಧ್ಯತೆಗಳಿರತ್ತವೆ. ಇದರ ಪ್ರಮಾಣ ಶೇ. 15 ರಿಂದ 48 ರಷ್ಟಿರುತ್ತದೆ.
ತಡೆಗಟ್ಟುವ ವಿಧಾನ (ಸೋಂಕು ತಗಲದಂತೆ ಎಚ್ಚರಿಕಾ ಕ್ರಮಗಳು): ಗಭರ್ಿಣಿಯಾದಾಗ ಅನೈತಿಕ ಸಂಬಂಧದಿಂದ ದೂರವಿರುವುದು, ಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು (ನಿರೋಧ್ ಬಳಕೆ) ಈಗಾಗಲೇ ಒಂದು ವೇಳೆ ಸೋಂಕು ತಗುಲಿದ್ದರೆ, ಗಭರ್ಾವಸ್ಥೆಯ ಸಮಯದಲ್ಲಿ ಕ್ರಮಬದ್ಧವಾಗಿ ಊ..ಗಿ.ಸೋಂಕಿಗೆ ಚಿಕಿತ್ಸೆ ಪಡೆಯುವುದು. ಪ್ರತಿ ಹಂತದಲ್ಲೂ ಸರಿಯಾದ ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಅತ್ಯವಶ್ಯಕ.
ಹೆರಿಗೆ ಸಮಯದಲ್ಲಿ ಸಹಜ ಹೆರಿಗೆಗಿಂತ ಶಸ್ತ್ರಕ್ರಿಯೆಯ ಹೆರಿಗೆಯೆ (ಸಿಸೆರಿಯನ್) ಹೆಚ್ಚು ಸೂಕ್ತ. ರಕ್ತ, ಪ್ಲಾಸೆಂಟಾ ಮುಂತಾದ ದ್ರವಗಳ ಬಗ್ಗೆ ಎಚ್ಚರಿಕೆಯಿಂದ ಸಂರಕ್ಷಿಸಿಕೊಳ್ಳಬೇಕು. ಹರಿತವಾದ ಸೂಜಿ, ಚಾಕು ಮುಂತಾದವುಗಳನ್ನು ಉಪಯೋಗಿಸಬಾರದು. ಒಮ್ಮೆ ಬಳಸಿದ ಉಡುಪನ್ನು, ಮಾಸ್ಕ್, ಕೈಕವಚ (ಗ್ಲೌಸ್) ಗಳನ್ನು, ಹಾಗೂ ಪಾದರಕ್ಷೆ ಮುಂತಾದವುಗಳನ್ನು ಪುನಃ ಬಳಸಬಾರದು. ಹೆರಿಗೆಯ ನಂತರ ಸ್ತನ್ಯಪಾನವನ್ನು ಮಾಡಿಸಬಾರದು. ಬಾಣಂತಿಯಾಗಿದ್ದಾಗ ಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು.
ಹಸಿರು ಸೊಪ್ಪಿನಿಂದ ಎಚ್ಐವಿ. ನಿವಾರಣೆ ಎಂದೆಲ್ಲಾ ಜಾಹೀರಾತು ನೀಡುವವರು ಡೊಂಗಿ ವೈದ್ಯರು. ನೀವೇ ಹೇಳಿದಂತೆ ಹಣ ಗಳಿಸಲು ಸಂಚು ಹಾಕುತ್ತಿರಬಹುದು. ಇಂಥವರ ಬಗ್ಗೆ ಎಚ್ಚರಿಕೆ ಮುಖ್ಯ.
ಏಡ್ಸ್ ಬಗ್ಗೆ ಎಷ್ಟೇ ಜಾಗೃತಿ ಮೂಡಿದ್ದರೂ, ಆದರೂ ಇಂದಿಗೂ ಏಡ್ಸ್ಗೆ ಜನರು ಬಲಿಯಾಗುತ್ತಿದ್ದಾರೆ ಎಂದರೆ ಜಾಗೃತಿ ಮೂಡಿದ್ದು ಸಾಕಾಗಲಿಲ್ಲವೆಂದೇ ಅರ್ಥ.

-ಚೇಕಿತಾನ್

By suddi9

Leave a Reply

Your email address will not be published. Required fields are marked *