ಮೂಡಬಿದಿರೆ: ಪಕ್ಕಾ ಇಂಡಿಯನ್ ಆರ್ಮಿ ತರ ಆಳ್ವಾಸ್ ಕಾಲೇಜ್ ಎದುರು ಪೋಸ್ ಕೊಡುತ್ತಿದ್ದ ದೈತ್ಯ ದೇಹದ ಅಜಾನುಬಾಹಿ ವ್ಯಕ್ತಿ ರಾಧಾಕೃಷ್ಣ ನಾಯಕ್(ಆರ್.ಕೆ. ನಾಯಕ್)(54) ಇನ್ನು ನೆನಪು ಮಾತ್ರ. ಆಳ್ವಾಸ್ ಕಾಲೇಜ್ನ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆರ್ಕೆ ನಾಯಕ್ ತನ್ನ ದೈತ್ಯ ದೇಹ ಹಾಗೂ ಡಿಫೆರೆಂಟ್ ಮ್ಯಾನರಿಸಂನಿಂದ ಎಲ್ಲರ ಗಮನ ಸೆಳೆಯುತ್ತಿದ್ದರು. ಪುಟ್ಟ ಮಕ್ಕಳು ಇವರನೊಮ್ಮೆ ನೋಡಿ ಓಡಿದರೆ ಹಾಗೆಯೇ ಎತ್ತಿ ಮುದ್ದಾಡಿ ತನ್ನ ಕೈವಶ ಮಾಡಿಕೊಳ್ಳುವ ಕಲೆ ಆರ್ ಕೆ ಅವರಿಗೆ ಕರಗತವಾಗಿತ್ತು.
radhakrshna(r k nayak (1)
ಆಳ್ವಾಸ್ ಕಾಲೇಜ್ನಲ್ಲಿ ಸುಮಾರು ಒಂದೂವರೆ ದಶಕಗಳ ಕಾಲ ದುಡಿಯುತ್ತಿದ್ದ ನಾಯಕ್ ಕೆಲವು ವರ್ಷಗಳಿಂದ ಅದೃಶ್ಯವಾಗಿ ಇದ್ದಿದ್ದರು. ತನ್ನ ದೈತ್ಯ ದೇಹ ಮರೆಯಾಗಿ ಕೃಷ ದೇಹವನ್ನು ಪಡೆದುಕೊಂಡಿದ್ದ ಇವರನ್ನು ಕಂಡ ಹಲವರು ಆಳ್ವಾಸ್ ಕಾಲೇಜ್ನಲ್ಲಿ ಇದ್ದ ವ್ಯಕ್ತಿ ಇವರೇನಾ ಎಂದು ಮರುಕ ಪಡುವಂಥಾ ಪರಿಸ್ಥಿತಿಗೆ ತಲುಪಿದ್ದರು.
ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರ್ ಕೆ ಅವರು ಮತ್ತೆ ಮೊದಲಿನಂತೆಯೇ ಆಗಬೇಕೆಂದು ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ತೊಡಗಿದ್ದರು. ಆದರೆ ಕಾಲನ ಕರೆಗೆ ಮಾತ್ರ ಯಾವುದೇ ಪ್ರಾರ್ಥನೆಗಳು ಫಲಿಸಿರಲಿಲ್ಲ. ಇಂದು(ಡಿ.2) ಬೆಳಗ್ಗಿನ ಜಾವ ನಾಲ್ಕರ ಸುಮಾರಿಗೆ ಆರ್ ಕೆ ನಾಯಕ್ ಇಹ ಲೋಕ ತ್ಯಜಿಸಿದ್ದಾರೆ.

radhakrshna(r k nayak (5)

ಇವರು ಕಳೆದ ಮೂರು ತಿಂಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆ ಬಳಿಕ ತೀವ್ರ ಅಸ್ವಸ್ಥರಾಗಿದ್ದರು. ಕೆಲವು ದಿನಗಳ ಹಿಂದೆ ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಧಕೃಷ್ಣ ನಾಯಕ್ ಅವರ ಆರೋಗ್ಯದಲ್ಲಿ ಗಂಭೀರ ಏರುಪೇರಾಗಿದ್ದು, ಮಂಗಳೂರಿನ ಕೆ.ಎಂ.ಸಿ ಆಸ್ಪತ್ರಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಸ್ಪಂಧಿಸದೆ ಮಂಗಳವಾರ ಬೆಳಿಗ್ಗೆ 4 ಗಂಟೆಗೆ ಆರ್.ಕೆ.ನಾಯಕ್ ಇಹ ಲೋಕ ತ್ಯಜಿಸಿದ್ದಾರೆ.

 

radhakrshna(r k nayak (2)

 

 

ರ್ ಕೆ ನಾಯಕ್ ಅವರ ಹಿನ್ನೆಲೆ:

ತನ್ನ ದೈತ್ಯ ದೇಹದಿಂದ ತೆಲುಗು ಸ್ಟಾರ್ ನಂತೆ ಕಂಗೊಳಿಸುತ್ತಿರುವ ಆರ್ ಕೆ ನಾಯಕ್ ಅವರ ಅಸಲಿ ಹೆಸರು ಅವರು ರಾಧಾಕೃಷ್ಣ ನಾಯ್ಕ(ಆರ್.ಕೆ ನಾಯ್ಕ). ಆಳ್ವಾಸ್ ನುಡಿಸಿರಿ, ಆಳ್ವಾಸ್ ವಿರಾಸತ್ ಬಂದರೇ ಸಾಕು, ಅಲ್ಲಿ ಇವರು ಇದ್ದೇ ಇರುತ್ತಿದ್ದರು. ತನ್ನ ವೇಷಭೂಷಣ, ಆರ್ಮಿ ಸ್ಟೈಲ್ ಡ್ರೆಸ್, ಬಿಗಿಯಾದ ಸಂಕೋಲೆ, ಕೂಲಿಂಗ್ ಗ್ಲಾಸ್, ಫ್ರೆಂಚ್ ಕಟ್ ಗಡ್ಡ ಜೊತೆಗೆ ಗತ್ತು ಗೈರತ್ತು ಇದೆಲ್ಲಾ ಇವರನ್ನು ಕೆಲ ಹೊತ್ತಿನಲ್ಲೇ ಆರ್ಕಷಿತರಾಗುವಂತೆ ಮಾಡುತಿತ್ತು.

radhakrshna(r k nayak (3)

ಮೂಲತಃ ಕಾರ್ಕಳದ ಬಂಗ್ಲೆಗುಡ್ಡೆಯ 54 ಹರೆಯದ ನಾಯ್ಕರು ಕೆಲವು ವರ್ಷಗಳ ಕಾಲ ಹೈದರಾಬಾದ್ನ ಹೊಟೇಲಿನಲ್ಲಿ ದುಡಿದಿದ್ದಾರೆ. ಆ ಸಂದರ್ಭದಲ್ಲಿ ನಾಲ್ಕು ಸಿನಿಮಾಗಳಲ್ಲಿ ವಿಲನ್ ಪಾತ್ರಕ್ಕೆ ಸಹಾಯಕ ಪಾತ್ರದಲ್ಲಿ ನಟಿಸಿದ್ದಾರೆ. ಸಾಹಸ ದೃಶ್ಯದ ತರಬೇತಿ ಪಡೆಯುತ್ತಿದ್ದ ವೇಳೆ ಬಿದ್ದು ಪೆಟ್ಟಾಗಿ ನಾಯ್ಕಕರು ಸಿನಿಮಾ ಹಾಗೂ ಹೋಟೆಲ್ ದುಡಿಮೆಯಿಂದ ದೂರ ಉಳಿಯಬೇಕಾಯಿತು. ಅಲ್ಲಿಂದ ಊರಿಗೆ ಬಂದು ಸಣ್ಣದೊಂದು ಹೋಟೆಲ್ ಮಾಡಿದರೂ ಲಾಭಗಳಿಸಲಾಗಲಿಲ್ಲ. ಬಳಿಕ ಅವರು ಆಳ್ವಾಸ್ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾಡರ್್ ಆಗಿ ಸೇರಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಯಿತು.

radhakrshna(r k nayak (4)

ಸೆಕ್ಯೂರಿಟಿ ಗಾಡರ್್ ಕೆಲಸಕ್ಕೆ ಸೇರಿದ 1 ವರ್ಷದಲ್ಲಿ ವಿಭಿನ್ನ ರೀತಿಯ ಧಿರಿಸು ಧರಿಸಿ `ಹೈದರಾಬಾದ್ ಸ್ಟೆಲ್’ ಸೆಕ್ಯೂರಿಟಿ ಗಾಡರ್್ ಆದರು. ಆಳ್ವರು ನಡೆಸುವ ಸಮ್ಮೇಳನ-ಸಮಾರಂಭದಲ್ಲಿ ಕಾಣಸಿಗುವ ನಾಯ್ಕರ ಮುಖ, ಅಪರೂಪದ ವೇಷಭೂಷಣ 14 ಸಾವಿರಕ್ಕೂ ಅಧಿಕ ಫೋಟೊಗಳಲ್ಲಿ ಪ್ರತಿರೂಪಗೊಂಡಿದೆ. ಹಲವಾರು ಮಂದಿ ಇವರ ಜೊತೆ ಫೋಟೋ ತೆಗೆದು ಪುನೀತರಾದವರಿದ್ದರೆ. ನೋಡಲು ಭಯವಾದರೂ ನಾಯಕರು ಮೃಧು ಸ್ವಭಾವದವರಾಗಿದ್ದರು. ಮೋಹನ್ ಆಳ್ವರವರು ನನಗೆ ಆಶ್ರಯ ನೀಡಿದ್ದಾರೆ. ಅವರ ಒಪ್ಪಿಗೆ ಇಲ್ಲದೆ ಇತರ ಯಾವುದೇ ಕಾರ್ಯಕ್ರಮಗಳಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಲಾರೆ ಎಂದು ಆಳ್ವರನ್ನು ಸ್ಮರಿಸುತ್ತಿದ್ದ ನಾಯಕರು ನಿಧನರಾಗಿರುವುದು ಅಭಿಮಾನಿಗಳ ಮನದಲ್ಲಿ ಕರಾಳ ಛಾಯೆ ಮೂಡಿಸಿದೆ.
-ಯಶ್ ಬೆದ್ರ

By suddi9

Leave a Reply

Your email address will not be published. Required fields are marked *