ಬೂಡಾ ಅಧ್ಯಕ್ಷರಿಗೆ ಬಿಲ್ಲವ ಸಂಘದಿಂದ ಅಭಿನಂದನೆ
ಬಂಟ್ವಾಳ: ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಬೇಬಿ ಕುಂದರ್ ಅವರನ್ನು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಷ್ಠಾ ದಿನದ ಸಂದರ್ಭ ಬಂಟ್ವಾಳ ತಾ. ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಅರ್ಚಕರಾದ ಲೋಕೇಶ್ ಶಾಂತಿ, ಸಂಘದ ಅಧಕ್ಷ ಸಂಜೀವ ಪೂಜಾರಿ ಗುರುಕೃಪ, ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಪ್ರ.ಕಾರ್ಯದರ್ಶಿ ರಮೇಶ್ ತುಂಬೆ, ಸದಸ್ಯರುಗಳಾದ ಹರೀಶ್ ಕೋಟ್ಯಾನ್, ದೇವಪ್ಪ ಕರ್ಕೇರ, ಗಣೇಶ್ ಪೂಂಜರಕೋಡಿ, ಲೋಕೇಶ್ ಅಲೆತ್ತೂರು, ಆನಂದ ಸಾಲಿಯಾನ್ ಶಂಭೂರು, ಹೇಮಂತ್ ಪೂಜಾರಿ ಮೂರ್ಜೆ, ವೀರೇಂದ್ರ ಅಮೀನ್ ವಗ್ಗ ಮೊದಲಾದವರಿದ್ದರು.