ಮಹಾಕುಂಭಾಭಿಷೇಕಕ್ಕೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಆಹ್ವಾನ
ಕೈಕಂಬ: ಬಡಗಬೆಳ್ಳೂರು ಕೊಳತ್ತಮಜಲು ಗುರುಮಂದಿರದಲ್ಲಿ ಮಾ.೨೪ರಂದು ಭಾನುವಾರ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕಕ್ಕೆ ಕನ್ಯಾಡಿ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರಿಗೆ ಆಮಂತ್ರಣ ಪತ್ರಿಕೆ ಕೊಟ್ಟು ಆಹ್ವಾನಿಸಲಾಯಿತು.

ಬಿಲ್ಲವ ಸಮಾಜ ಸೇವಾ ಸಂಘ ಪಂಚಗ್ರಾಮದ ಅಧ್ಯಕ್ಷ ಗಂಗಾಧರ ಜೆ. ಪೂಜಾರಿ, ರೋಶನ್ ಅಮೀನ್ ಪುಂಚಮೆ, ರಾಜು ಕೋಟ್ಯಾನ್, ಪ್ರಸಾದ್ ಗರೋಡಿ ಸ್ವಾಮೀಜಿಯವರಿಗೆ ಆಮಂತ್ರಣ ಪತ್ರ ನೀಡಿ ಮಹಾ ಕುಂಭಾಭಿಷೇಕಕ್ಕೆ ಆಹ್ವಾನಿಸಿದರು.