ಶ್ರೀ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿಯ ೯ನೇ ವರ್ಷದ ಅಖಂಡ ಭಜನಾ ಸಪ್ತಾಹದ ಮಹಾಸಭೆಯ ವಿಜ್ಞಾಪನಾ ಪತ್ರ ಬಿಡುಗಡೆ
ಪೊಳಲಿ: ಇತಿಹಾಸ ಪ್ರಸಿದ್ಧ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಮೀಪದಲ್ಲಿ ಪಲ್ಗುಣಿ ನದಿ ತಟದಲ್ಲಿ ನೆಲೆಸಿರುವ ಶ್ರೀ ಅಖಿಲೇಶ್ವರ ದೇವರ ಸನ್ನಿಧಿಯಲ್ಲಿ ಹಿರಿಯರ ಮಾರ್ಗದರ್ಶನದಿಂದ ಅರ್ಚಕರ ಹಾಗೂ ಆಡಳಿತ ಮಂಡಳಿಯಯವರ ಸಂಪೂರ್ಣ ಸಹಕಾರದೊಂದಿಗೆ ಶ್ರೀ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ೨೦೧೫ರಲ್ಲಿ ಸ್ಥಾಪನೆಗೊಂಡಿತ್ತು ಬಳಿಕ ಮಂಡಳಿಗೆ ಶ್ರೀ ಅಖಿಲೇಶ್ವರ ಓಂಕಾರ ಭಜನಾ ಮಂಡಳಿ ಎಂದು ಮರುನಾಮಕರಣ ಮಾಡಲಾಯಿತು.

ಭಜನಾ ಮಂಡಳಿಯು ಕಳೆದ ೮ವರ್ಷಗಳಿಂದ ದೇವರ ಸನ್ನಿಧಿಯಲ್ಲಿ ಪ್ರತೀ ಸೋಮವಾರ ವಾರದ ಭಜನೆಯನ್ನು ಹಾಗೂ ನೂರಾರು ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ಇನ್ನೂ ಅನೇಕ ಧಾರ್ಮಿಕ ದೇವತಾ ಕಾರ್ಯಕ್ರಮಗಳಲ್ಲಿ ಭಜನಾ ಸಂಕೀರ್ತನೆ ನಡೆಸುತ್ತಾ ಬಂದಿರುತ್ತದೆ.

ಕಳೆದ ೮ ವರ್ಷಗಳಿಂದ ಭಜನಾ ಮಂಡಳಿಯ ವಾರ್ಷಿಕ ಭಜನಾ ಮಂಗಳೋತ್ಸವವನ್ನು ಕಾರ್ತಿಕ ಮಾಸದ ಕೊನೆಯ ಶನಿವಾರದಂದು ೨೪ ಗಂಟೆಗಳ ಅಹೋರಾತ್ರಿ ಏಕಾಹ ಭಜನೆ ನಡೆಸುತ್ತಿತ್ತು.
ಆದರೆ ಈ ಬಾರಿ ಭಜನಾ ಮಂಡಳಿಯ ೯ನೇ ವರ್ಷದ ಭಜನಾ ಮಂಗಳೋತ್ಸವ ಹಾಗೂ ೧೦ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಶುಭಸಂದರ್ಭದಲ್ಲಿ ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ೭ ದಿನಗಳ ಅಖಂಡ ಭಜನಾ ಸಪ್ತಾಹವನ್ನು ನ.೩೦ರಿಂದ ಡಿಸೆಂಬರ್ ೭ರವರೆಗೆ ನಡೆಸಬೇಕೆಂದು ಇಚ್ಛಿಸುತ್ತಿದ್ದು ಇದರ ಸಲುವಾಗಿ ಸೆ.೮ರಂದು ಭಾನುವಾರ ಅಖಿಲೇಶ್ವರ ದೇವಸ್ಥಾನದ ವಠಾರದಲ್ಲಿ ಮಹಾಸಭೆ ನಡೆಯಲಿದೆ ಎಂದು ಶ್ರೀ ಅಖಿಲೇಶ್ವರ ಓಂಕಾರ ಭಜನಾ ಮಂಡಳಿ ಪೊಳಲಿಯ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸೆ.೮ರಂದು ನಡೆಯಲಿರುವ ಮಹಾಸಭೆಗೆ ಆಗಮಿಸಿ ಮುಂದೆ ನಡೆಯಲಿರುವ ಅಖಂಡ ಭಜನಾ ಕಾರ್ಯಕ್ರಮಕ್ಕೆ ಸೂಕ್ತ ಸಲಹೆಗಳನ್ನು ನೀಡುವಂತೆ ಭಗದ್ಭಕ್ತರಲ್ಲಿ ಸಹಕಾರವನ್ನು ಅಪೇಕ್ಷಿಸಿ ಮಾ.೧೮ರಂದು ಸೋಮವಾರ ಮುಂಬೈನ ನಿತ್ಯಾನಂದ ಭಜನಾ ಮಂದಿರದಲ್ಲಿ
ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿದರು.