ಶ್ರೀ ಕ್ಷೇತ್ರ ಪೊಳಲಿಯಲ್ಲಿ ಜಾತ್ರಾ ಮಹೋತ್ಸವದ ಐದನೇ ದಿನದಂದು ತುಲಾಭಾರ ಸೇವೆ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ಜಾತ್ರಾ ಮಹೋತ್ಸವದ ಐದನೇ ದಿನ ಮಾ.19ರಂದು ಮಂಗಳವಾರ ತುಲಾಭಾರ ಸೇವೆ ನಡೆಯಿತು.
ಜಾತ್ರಾ ಮಹೋತ್ಸವದ 5ನೇ ದಿನದಂದು ದೇವಾಲಯದಲ್ಲಿ ಭಕ್ತಾದಿಗಳಿಂದ 77 ತುಲಾಬಾರ ಸೇವೆ ಶ್ರೀ ದೇವರಿಗೆ ಅರ್ಪಣೆಯಾಯಿತು.
ದಂಡಮಾಲೆಯ ದಿನ ತುಲಾಭಾರ ಸೇವೆಯೆಂದರೆ ಶರೀರವನ್ನು ದೇವರಿಗೆ ಅರ್ಪಿಸುವ ಹರಕೆ, ಬಾಧಿಸುವ ಆರೋಗ್ಯ ಸಮಸ್ಯೆ, ಜೀವನದಲ್ಲಿ ಬರುವಂತಹ ತಾಪತ್ರಯಗಳನ್ನು, ಕಷ್ಟಗಳನ್ನು ಪರಿಹರಿಸಲು ಆಗದ ಸಂದರ್ಭದಲ್ಲಿ ಅನ್ಯತಾ ಶರಣಂ ನಾಸ್ತಿ ತ್ವಮೇವಂ ಶರಣಂ ಮಮ ಎಂಬಂತೆ ದೇವರ ಮೋರೆ ಹೋಗಿ ಹರಕೆ ಹೇಳುತ್ತಾರೆ.
ತಮ್ಮ ಕುಟುಂಬದ ಸದಸ್ಯರಿಗೆ ಬಂದಂತಹ ಕಷ್ಟ ಪರಿಹಾರವಾದರೆ ಅವರ ಹೆಸರಲ್ಲಿ ತುಲಾಭಾರ ಸೇವೆಯನ್ನು ಮಾಡಿಸುತ್ತೇವೆ ಎಂದು ಸಂಕಲ್ಪ ಮಾಡಿ ಹರಕೆಯನ್ನು ಪೂರ್ಣಗೊಳಿಸಿದ ಬಳಿಕ ಇನ್ನೊಂದು ಬಾರಿ ತುಲಾಭಾರ ಸೇವೆ ಮಾಡುವಂತೆ ಇಲ್ಲ ಒಮ್ಮೆ ಶರೀರವನ್ನು ದೇವರಿಗೆ ಸಮರ್ಪಿಸಿದ ಬಳಿಕ ಶರೀರದ ರಕ್ಷಣೆಯ ಭಾರ ದೇವರದ್ದು.
ತುಲಾಭಾರ ಸೇವೆ ಮಾಡಿಸಿದ ಸಲುವಾಗಿ ಪ್ರತೀ ವರ್ಷ ದೇವಸ್ಥಾನಕ್ಕೆ ಬಂದು ಶ್ರೀ ದೇವಿಯ ದರ್ಶನ ಪಡೆದು ಹುಂಡಿ ಕಾಣಿಕೆ ಸಲ್ಲಿಸುವ ಪದ್ಧತಿ ಮೊದಲಿನಿಂದಲೂ ನಡೆಯುತ್ತಾ ಬರುತ್ತಿದೆ ಎಂದು ಶ್ರೀ ಕ್ಷೇತ್ರ ಪೊಳಲಿಯ ಪ್ರಧಾನ ಅರ್ಚಕ ಕೆ.ರಾಮ್ ಭಟ್ ಪೊಳಲಿ ತಿಳಿಸಿದರು.