Published On: Wed, Mar 13th, 2024

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ವೈಭವದ ಜಾತ್ರೆಗೆ ಕ್ಷಣಗಣನೆ

ಪೊಳಲಿ: ಮೂಡಣದಲ್ಲಿ ಮಂಜಿನ ಬೆಟ್ಟ ಪಡುವಣದಲ್ಲಿ ಕಡಲಿನ ಘಟ್ಟ. ಈ ಪಡುವಣ ಕಡಲಿನ ತೆಂಗಿನ ಮಡಿಲಿನ ನಾಡು ವರುಣ ದೇವ ಪರಶುರಾಮ ದೇವರಿಗೆ ದಾನವಾಗಿ ಕೊಟ್ಟ ಭೂಮಿ ಅದುವೇ ನಮ್ಮೆಲ್ಲರ ಪುಣ್ಯ ಭೂಮಿ ತುಳುನಾಡು.

ಸಾಂದರ್ಬಿಕ ಚಿತ್ರ

ಬಡಗು ಬಾರ್ಕೂರಿನಿಂದ ತೆಂಕು ಚಂದ್ರಗಿರಿ ನದಿ ಮೂಡಣ ಘಟ್ಟ ದಿಂದ ಪಡುವಣ ಕಡಲಿನವರೆಗೆ ಪಸರಿಸಿದ ನಾಡು ಈ ನಮ್ಮ ತುಳುನಾಡು.ಇಡೀ ನಮ್ಮ ಕರ್ನಾಟಕವನ್ನು ಒಂದು ಮನೆಯಾಗಿ ಪರಿಗಣಿಸಿದರೆ ಅದರಲ್ಲಿ ದೇವರಕೋಣೆ ಈ ನಮ್ಮ ತುಳುನಾಡು.

ಸಾಂದರ್ಬಿಕ ಚಿತ್ರ

ಈ ನಮ್ಮ ತುಳುನಾಡಿನ ಉದ್ದಗಲಕ್ಕೂ ಅಲ್ಲಲ್ಲಿ ತೀರ್ಥ ಕ್ಷೇತ್ರಗಳು, ಪುಣ್ಯ  ಕ್ಷೇತ್ರಗಳು, ನಾಗ ದೇವರ ಸಾನಿಧ್ಯ, ದೈವಾಲಯಗಳು ಕಂಗೊಳಿಸಿ ತಮ್ಮ ಕಾರಣಿಕವನ್ನು ಬೆಂಬಸುತ್ತವೆ. ಅಂತಹ ಪುಣ್ಯ ಕ್ಷೇತ್ರಗಳಲ್ಲಿ ಅತೀ ಪುರಾತನವೂ ಅತ್ಯಂತ ಕಾರಣೀಕ ಕ್ಷೇತ್ರವಾಗಿದೆ, ಸಮಸ್ತ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತ  ಭಾವುಕ ಭಕ್ತರನ್ನು ತನ್ನಡೆಗೆ ಆಕರ್ಷಿಸುವ ಪುಣ್ಯ ಕ್ಷೇತ್ರ ಪೊಳಲಿ.

ಸಾಂದರ್ಬಿಕ ಚಿತ್ರ

ಮಧ್ಯಮ ಪಾಂಡವನಾದ ಅರ್ಜಾನನ ಶರದಿಂದ ಸೃಷ್ಟಿಸಲ್ಪಟ್ಟ ಕುದುರೆಮುಖ ಘಟ್ಟ ದಿೆಂದ ಇಳಿದು ಬರುವ ಪುಣ್ಯ ನದಿ ಫಲ್ಗು ಣಿ  ತಟದಲ್ಲಿ ಕಂಗೊಳಿಸುವ ಸಾವಿರ ಸೀಮೆಯ  ಒಡತಿ ರಾಜರಾಜೇಶ್ವರೀ ಅಡಂಬೊಲವದ ಪೊಳಲಿ  ಕ್ಷೇತ್ರದಲ್ಲಿ ನಡೆಯುವ 1 ತಿಂಗಳ    ಜಾತ್ರೆ
ಪೊಳಲಿಯ ಚೆಂಡು  ಜಗತ್ ಪ್ರಸಿದ್ಧವಾದುದು. ಸುಮೇದಮಹಾ ಮುನಿಯ ಆದೇಶದಂತ ಪುಣ್ಯ ಪುರುಷರಾದ ಸುರತ
ಮಹಾರಾಜ  ಹಾಗೂ ಸುಮೆದ  ವೈಶಯರು ಪ್ರತಿಷ್ಟಾ ಪಿಸಿದ ಈ ಪುಣ್ಯ   ಕ್ಷೇತ್ರಕ್ಕೆ ಸುಮಾರು 2000 ವರ್ಷಗಳ ಇತಹಾಸವಿದೆ.


ಮೀನ ಸಂಕ್ರಮಣ (ಮಾರ್ಚ್ 14 )ರಿೆಂದ ಮೇಷ ಸಂಕ್ರ ಮಣವಾದ ( ಎಪ್ರಿಲ್ 14 )ರವರೆಗೆ 1 ತಿಂಗಳ ಜಾತ್ರೆ ಇಲ್ಲಿ
ಸಂಪನ್ನ ಗೊಳ್ಳುತ್ತದೆ . ಆದರೆ ಪೂರ್ತಿ 30 ದಿನಗಳ ಜಾತ್ರೆ ಪ್ರತಿ ವರ್ಷ ನಡೆಯುವುದಿಲ್ಲ.

ಸಾಂದರ್ಬಿಕ ಚಿತ್ರ

27 ರಿೆಂದ 28′,29, ಅಥವಾ 30 ದಿನಗಳಲ್ಲಿ ಯಾವುದಾದರೊಂದು ದಿನ ನಿಷ್ಯಯವಾಗುತ್ತದೆ.

ಮಾರ್ಚ್ 14 ರಂದು ಧ್ವ ಜಾರೋಹಣವಾಗಿ ಮರುದಿನ ಕಂಚಿಲು ಬಲಿಉತ್ಸವ ಮುಗಿದು ಆಗುವವರೆಗೆ ಎಷ್ಟು ದಿನದ ಜಾತ್ರೆ ಎಂದು ಕ್ಷೇತ್ರದ ತಂತ್ರಿವರ್ಗದವರಿಗಾಗಲಿ ಅರ್ಚಕರಿಗಾಗಲಿ
ಆಡಳಿತ ಮಂಡಳಿಯವರಿಗಾಗಲಿ ತಿಳಿದಿರುವುದಿಲ್ಲ ಅದು ತಿಳಿದು ಬರುವುದು “ಆರಾಡ ಲೆಪ್ಪುನಿ ಅಥವಾ ಕುದಿಲೆಪ್ಪುನಿ ” ಎನ್ನುವ ವಿಶಿಷ್ಟವಾದ ಕಾರ್ಯಕ್ರಮ ನಡೆದಾಗಲೆ.   ಇದು ಪೊಳಲಿಯ ವಿಶೇಷತೆಗಳಲ್ಲಿ ಒಂದು.

ಸಾಂದರ್ಬಿಕ ಚಿತ್ರ

ಪೊಳಲಿ ದೇವಸ್ಥಾನವು ಅನಾದಿಕಾಲದಲ್ಲಿ ಮೂಡಬಿದಿರೆ ಚೌಟ ಅರಸರ ಆಳ್ವಿಕೆಗೆ ಒಳಪಟ್ಟಿತು ಆದುದರಿೆಂದ
ಅದರ ಜಾತ್ರೆಯ ದಿನ ಮೂಡಬಿದಿರೆಯಲ್ಲಿ ನಿಶ್ಚಯ ಯವಾಗುತ್ತದೆ ಈಗಲೂ ಅದು ನಿಶ್ಚಯವಾಗುವುದು ಮೂಡಬಿದಿರೆಯಲ್ಲಿ.
ಅರಸರ ಆಳ್ವಿಕೆಗೆ ಒಳಪಟ್ಟ ಪುತ್ತಿಗೆಯ ಜೋಯಿಸರ ಕವಡೆಯ ಮಣೆಯಲ್ಲಿ.

ಸಾಂದರ್ಬಿಕ ಚಿತ್ರ

ಇದಕೂೂ ಒಂದು  ವಿಶೇಷವಾದ ಕ್ರಮವಿದೆ. ಪೊಳಲಿ ಕ್ಷೇತ್ರದ  ನಟ್ಟೋಜ ಮನೆತನದ ವ್ಯಕ್ತಿಯೊಬ್ಬರು ಧ್ವ ಜಾರೋಹಣದ ಮುಂಚಿನ ದಿನ ದೇವಸ್ಥಾನದಲ್ಲಿ  ಪ್ರಸಾದ ಸ್ವೀಕರಿಸಿ ಪುತ್ತಿಗೆಗೆ ಜೋಯಿಸರ ಮನೆಗೆ ಪ್ರಯಾಣ ಬೆಳೆಸುತ್ತಾರೆ ( ಹಿಂದಿನ ಕಾಲದಲ್ಲಿ
ಕಾಲ್ನಡಿಗೆಯಲ್ಲಿ   ಈಗ ವಾಹನದಲ್ಲಿ ) ಜೋಯಿಸರ ಮನೆಗೆ ಬಂದ ನಟ್ಟೋಜರನ್ನು ಗೌರವಪೂರ್ವಕವಾಗಿ ಸತ್ಕರಿಸಿ
ಮರುದಿನ ಬೆಳಿಗೆ ಅವರ ಜೋತಿಷ್ಯದ ಮಣೆಯ ಕವಡೆಯಲ್ಲಿ ಜಾತ್ರೆಯ ದಿನವನ್ನು ನಿಶ್ಚಯಿಸಿ ಗೌಪ್ಯ ವಾಗಿ ಅವರ
ಕಿವಿಯಲ್ಲಿ ತಿಳಿಸುತ್ತಾರೆ. ಧ್ವಜಾರೋಹಣದ ದಿನ ಸಂಜೆ ಕ್ಷೇತ್ರಕ್ಕೆ ಬಂದ  ನಟ್ಟೋಜರು  ಜೋತಿಷ್ಯರು ನೀಡಿದ
ಹಿಂಗಾರದ ಹಾಳೆಯನ್ನು ದೇವರ ಗರ್ಭಗುಡಯಲ್ಲಿ ಇರಿಸಿ ಪ್ರಸಾದ ಸ್ವೀಕರಿಸುತ್ತಾರೆ.

ಸಾಂದರ್ಬಿಕ ಚಿತ್ರ

ಆ ದಿವಸ ರಾತ್ರಿ ಉಳ್ಳಾಲ ಶಶ್ರೀ ಭಗವತೀ ಕ್ಷೇತ್ರಕೊಳಪಟ್ಟ ತೀಯಾ ಸಮಾಜ ಬಾಂದವರ   ಕೇಂದ್ರಸ್ಥಾನವಾದ ಅಡ್ಡೂರು ನಂದ್ಯಾ ಕ್ಷೇತ್ರದಿಂದ ಶ್ರೀ ಭಗವತೀ ಮಾತೆಯ ಸಾನಿಧ್ಯ (ದೀಪ ಸಂಕಲ್ಪ) ಶ್ರೀ ಭದ್ರಕಾಳಿ ದೇವಿಯ ಬಿಂಬ, ಅರಸು ದೈವದ ಆಯುಧ, ಬೆತ್ತದಿಂದ ತಯಾರಿಸಿದ ಕದೃಮುಡಿಯೊಂದಿಗೆ ಫಲ್ಗು ಣಿ ನದಿಯನ್ನು ದೋಣಿಯಮೂಲಕ ದಾಟಿ ಸೂಟೆಯ ಬೆಳಕಿನಲ್ಲಿ
ನಡೆದುಕೊೆಂಡು ಮಹಮ್ಮಾಯಿ ಕಟ್ಟೆಯನ್ನು  ಸಮಸ್ತ ಭಗವಭಕ್ತರು ಹಾಗೂ ತೀಯಾ ಸಮಾಜ ಭಾಂದ ದವರೆಂದಿಗೆ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಅವರನ್ನು ಕ್ಷೇತ್ರದ ಆಡಳಿತ ಮಂಡಳಿಯವರು ಗೌರವ ಪೂರ್ವಕವಾಗಿ
ಬರಮಾಡಿಕೊಳ್ಳುತ್ತಾರೆ.ಉಳಿಪಾಡಿ ಗುತ್ತಿನಿಂದ  ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸುತ್ತದೆ. ಅದನ್ನು
ಕ್ಷೇತ್ರದ ಆಡಳಿತ ಮಂಡಳಿಯ ಪ್ರಮುಖರು ಗೌರವ ಪೂರ್ವಕವಾಗಿ ಸ್ವಾಗತಿಸಿ ಕ್ಷೇತ್ರಕ್ಕೆ ಬರಮಾಡಕೊಳ್ಳುತ್ತಾರೆ. ಆ
ಬಳಿಕ ಧ್ವಜಾರೋಹಣವಾಗುತ್ತದೆ. ಮರುದಿನ ಬೆಳಿಗ್ಗೆ ಕಂಚಿಲ್ದ ಬಲಿ ಹೊರಡುತ್ತದೆ. ಕಂಚೀಲ್ದ ಸೇವೆಯ
ಭಕ್ತ ದಡಗೂಡ   ಕಂಚಿಲ್ದ ಬಲಿ ಮುಗಿದು  ರಥೋತ್ಸವ ಜರಗುತ್ತ ದೆ.

ಸಾಂದರ್ಬಿಕ ಚಿತ್ರ

ಆ ಬಳಿಕ ಕ್ಷೇತ್ರದ ಆಡಳಿತ ಮಂಡಳಿಯವರ ಒಪ್ಪಿಗೆ ಬಂದ ಬಳಿಕ ನಂದ್ಯದ ಗುರಿಕಾರರು ಹಾಗೂ ತೀಯಾ ಸಮಾಜದ ಪ್ರಮುಖರು ಭದ್ರಕಾಳಿ ಹಾಗೂ ಅರಸು ದೈವದ ಅಲಂಕಾರ ಗೊಂಡ ಪಂಬದ ಬಂದುಗಳನ್ನು ರಾಜoಗಣಕ್ಕೆ ಕರೆದುಕೊಂಡು ಬಂದು ಅಲ್ಲಿ “ಕದ್ರು ಮುಡಿ ಏರುನ” ಎನ್ನುವ ವಿಶಿಷ್ಟ ಕಾರ್ಯಕ್ರಮ ಜರಗುತ್ತ ದೆ ನಂದ್ಯಾ ಕ್ಷೇತ್ರ ದಿಂದ ಬಂದ ಕದ್ರ್ಮುಡಿಯಲ್ಲಿ
ಪ್ರತಿಷ್ಟಾ ಪಿಸಿದ  ಶ್ರೀ ಭದ್ರ ಕಾಳಿದೇವಿಯ ಬಿಂಬವನ್ನು ಭದ್ರಕಾಳಿ ದೇವಿಯ  ಅಲಂಕಾರದಲ್ಲಿ ರುವ ಪಂಬದ ಬಂಧುಗಳು
ತಲೆಯಲ್ಲಿರಿಸಿ ನಂದ್ಯದ ಗುರಿಕಾರರು ಅದನ್ನು ಮೂರು ಸುತ್ತು ತಿರುಗಿಸುತ್ತಾರೆ.

ಸಾಂದರ್ಬಿಕ ಚಿತ್ರ

ಅದನ್ನು ಕೆಳಗಿಳಿಸಿದ ಪಂಬದ ಬಂಧುಗಳು ಜಾಗಟೆ ಬಾರಿಸುತ್ತಾ ತೀಯಾ ಸಮಾಜದವರೆಂದಿಗೆ ಪ್ರಮಾಣ ಬಾವಿಗೆ ಬಂದು ಸುತತ್ತು ಬಂದು ಕ್ಷೇತ್ರದ ಗೋಪುರದ ಬಳಿ ಬರುತ್ತಾರೆ ಆಗ ನಟ್ಟೋಜರು ಹಿಂಗಾರದ ಹಾಳೆಯನ್ನು ಹಡದುಕೊೆಂಡು ಶ್ರೀ ದುಗಾಾಪರಮೇಶವರಿೀ
ದೇವಸ್ಥಾನದ ಹಿಂಬದಿಯಲ್ಲಿ ನಿಂತಿರುತ್ತಾರೆ. ಅಲ್ಲಿಗೆ ಕ್ಷೇತ್ರದ ಸೇರಿಗಾರರಾ ಬರುತ್ತಾರೆ. ಅವರ ಕೈಗೆ ಹೆಂಗಾರ ಹಾಳೆಯನ್ನು ನಟ್ಟೋಜರು ಕೊಟ್ಟು ಅರಾಡದ ದಿನವನ್ನು ಗೌಪ್ಯಾವಾಗಿ ಅವರ ಕಿ ವಿಯಲ್ಲಿ ತಿಳಿಸುತ್ತಾರೆ. ಅವರು ಅಂಗಣಕ್ಕೆ ಬಂದು ಭದ್ರಕಾಳೀ ಅಲಂಕಾರದಲ್ಲಿ ರುವ ಪಂಬದ ಬಂಧುಗಳ ಕಿವಿಯಲ್ಲಿ ಅರಾಡದ ದಿನವನ್ನು ಘೋಷಿಸುತ್ತಾರೆ ಆಗ ಭದ್ರಕಾಳೀ ಅಲಂಕಾರದಲ್ಲಿರುವ ಪಂಬದರು ಮೂರು ಬಾರಿ ಜಾಗಟೆ ಬಾರಿಸಿ ಜಾತ್ರೆಯ ದಿನ ಗೊತ್ತಪಡಿಸುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತಾಧಿಗಳು ಅದನ್ನು ತದೇಕಚಿತ್ತ ದಿೆಂದ ಆಲಿಸುತ್ತಾರೆ. ಆಗ ಪೊಳಲಿ ಕ್ಷೇತ್ರದ ಜಾತ್ರೆಯ ವಿವರ ಗೊತ್ತಾಗುತ್ತ ದೆ.

ಆ ಬಳಿಕ ಪಂಬದ ಬಂಧುಗಳನ್ನು ತೀಯಾ ಸಮಾಜದವರು, ಗುರಿಕಾರರು, ಅಖಿಲೇಶ್ವರ ಕ್ಷೇತ್ರಕ್ಕೆ ಕರೆದುಕೊೆಂಡು ಬಂದು ಅಲ್ಲಿಯೂ ಅರಾಡ ಕರೆಯಿಸುತ್ತಾರೆ. ಮರುದಿನ ಬೆಳಿಗ್ಗೆ ಕ್ಷೇತ್ರದ ಅಂಗಣದಲ್ಲಿ ಮೊದಲ ದಿನದಂತಯೇ ಆರಾಡ ಕರೆದು ಆ ಬಳಿಕ ಪಂಬದ ಬಂಧುಗಳನ್ನು ಮಹಮ್ಮಾಯಿ ಕಟ್ಟೆ ಸೂಲೇಕಿನ ಪಡಪು )ಗೆ ಕರೆದುಕೊೆಂಡುಬಂದುಅಲ್ಲಿ ಆರಾಡ ಕರೆಯಿಸಿ ಫಲ್ಗು ಣಿ ನದಿಯನ್ನು  ದೋಣಿಯ ಮೂಲಕ ದಾಟಿಸಿ ನಂದ್ಯ ಕ್ಷೇತ್ರಕ್ಕೆ ಕರೆದುಕೊೆಂಡು ಬಂದು ಅಲ್ಲಿ ಭದ್ರ ಕಾಳೀ ಕ್ಷೇತ್ರದ ಎದುರು ಆರಾಡ ಕರೆಯುತ್ತಾರೆ . ಪೊಳಲಿ ಕ್ಷೇತ್ರ ಬಟ್ಟಟ ಬೇರೆ
ಕ್ಷೇತ್ರಕ್ಕೂ ಹೋಗಿ ಆರಾಡ ಕರೆಯುವುದು. ನಂದ್ಯಕ್ಷೇತ್ರದಲ್ಲಿ ಮಾತ್ರ ಆ ಬಳಿಕ ಪಂಬದ ಬಂಧುಗಳನ್ನು ಹಾಗೂ
ವಾಲಗದವರನ್ನು ಹಾಗೂ ಇತರ ಸೇವಾಕರ್ತಾರನ್ನು ನಂದ್ಯದ ಮನೆಯಲ್ಲಿ ಗೌರವಪೂವಾಕವಾಗಿ ಸತ್ಕಾರಿಸಿ
ಸಂಭಾವನೆ ನೀಡಿ ಕಳುಹಿಸಿಕೊಡಲಾಗುತ್ತದೆ.  ಆರಾಡ ಕರೆಯುವ ಎಲ್ಲಾ ಖರ್ಚು ನ್ನು ನಂದ್ಯಾದ ಮನೆಯವರೇ
ಭರಿಸುತ್ತಾರೆ. ಇದು ಪೊಳಲಿ ಶ್ರೀ ರಾಜರಾಜೇಶ್ವರಿಗೂ ಶ್ರೀ ಭಗವತೀ ಮಾತೆಗೂ ಇರುವ ,ತೀಯಾ ಸಮಾಜ
ಬಾಂಧವರಿಗೂ ನಂದ್ಯ ಕ್ಷೇತ್ರ ಪೊಳಲಿ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ಆ ಬಳಿಕ ಪ್ರತಿ ಐದು
ದಿವಸಗಳಿಗೊಮ್ಮೆ ದಂಡಮಾಲೆ ಎನ್ನುವ ವಿಶೇಷ ಜಾತ್ರೆ . ಕೊನೆಗೆ ೭ ದಿನ ಮೊದಲಿಗೆ ಚೆಂಡು ಪ್ರಾರಂಭವಾಗಿ 5 ದಿನ
ಚೆಂಡನ ಉತ್ಸ ವ. ಅದರ ಮರುದಿನ ಬ್ರಹ್ಮರಥೋತ್ಸ ವ ಕೊನೆಯ ದಿನ ಅವಭೃತ ಸ್ನಾನ . ಹೀಗೆ ಪೊಳಲಿಯ ಜಾತ್ರೆ
ಸಂಪನ್ನಗೊಳ್ಳುತ್ತದೆ. ಇಂತಹ ಅಪರೂಪದ  ಕಾರ್ಯಕ್ರಮ ಪೊಳಲಿ ಕ್ಷೇತ್ರದಲ್ಲಿ ಬೇರೆಲ್ಲೂ ಕಾಣಸಿಗದು. ಇದು ಪುಳಿನಾ
ಪುರದ ಶ್ರೀ ಲಲಿತರೂಪಿಣಿ. ತಾಯಿ ರಾಜರಾಜೇಶ್ವರಿಯ ಮಹಿಮೆ.


ಬಿ .ಜನಾರ್ದನ ಅಮ್ಮುಂಜೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter