ಬಂಟ್ವಾಳ: ಬಿಜೆಪಿ ಪ್ರತಿಭಟನೆ
ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹ
ಬಂಟ್ವಾಳ:ರಾಜ್ಯದ ಇತಿಹಾಸದಲ್ಲೇ ಅಪರೂಪ ಎಂಬಂತೆ ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಸೇರಿದಂತೆ ಬೆಂಗಳೂರಿನ ಉಪಹಾರ ಮಂದಿರದಲ್ಲಿ ಶುಕ್ರವಾರ ನಡೆದ ಬಾಂಬ್ ಸ್ಫೋಟ ಪ್ರಕರಣ ಬಗ್ಗೆ ಗಂಭೀರ ನಿಲುವು ತಾಳದೆ ನಿರ್ಲಕ್ಷ್ಯ ಧೊರಣೆ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜೀನಾಮೆ ಸಲ್ಲಿಸಬೇಕು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.

ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಕ್ಷೇತ್ರ ಬಿಜೆಪಿ ವತಿಯಿಂದ ಶನಿವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇವಲ ಮತ ಬ್ಯಾಂಕ್ ಉಳಿವಿಗಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ತಳೆದಿರುವ ಮೃದು ಧೋರಣೆಗಳೇ ಇಂತಹ ದುಷ್ಕೃತ್ಯಗಳಿಗೆ ಕಾರಣ ಎಂದು ಅವರು ಟೀಕಿಸಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಸಂವಿಧಾನ ಬಗ್ಗೆ ಪಾಠ ಮಾಡುವ ಕಾಂಗ್ರೆಸ್ ಓಟ್ ಬ್ಯಾಂಕ್ ನೆಪದಲ್ಲಿ ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತಾಗಿದೆ ಎಂದು ಆರೋಪಿಸಿದರು. ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ರಾಜ್ಯವು ಭಯೋತ್ಪಾದನಾ ತಾಣವಾಗುತ್ತಿರುವುದು ಕಾಂಗ್ರೆಸ್ ಗ್ಯಾರಂಟಿ ಎಂದು ಟೀಕಿಸಿದರು.
ಪ್ರಮುಖರಾದ ವಿಕಾಸ್ ಪುತ್ತೂರು, ರಾಮದಾಸ ಬಂಟ್ವಾಳ, ಸುಲೋಚನಾ ಜಿ.ಕೆ.ಭಟ್, ದೇವಪ್ಪ ಪೂಜಾರಿ, ಆರ್.ಚೆನ್ನಪ್ಪ ಕೊಟ್ಯಾನ್, ಬಿ.ದೇವದಾಸ ಶೆಟ್ಟಿ, ಡೊಂಬಯ ಅರಳ, ಎಂ.ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ, ಕಿಶೋರ್ ಪಲ್ಲಿಪ್ಪಾಡಿ, ರವೀಶ್ ಶೆಟ್ಟಿ ಕರ್ಕಳ, ದಿನೇಶ್ ಅಮ್ಟೂರು, ವಜ್ರನಾಥ ಕಲ್ಲಡ್ಕ, ಲಖಿತಾ ಆರ್. ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಪುರುಷೋತ್ತಮ ಸಾಲಿಯಾನ್, ಜನಾರ್ದನ ಬೊಂಡಾಲ, ಆನಂದ ಶಂಭೂರು, ಎ.ಗೋವಿಂದ ಪ್ರಭು, ಹರಿಪ್ರಸಾದ್, ಶುಭಕರ ಶೆಟ್ಟಿ, ಚಿದಾನಂದ ರೈ ಕಕ್ಯ, ಸಂತೋಷ್ ಕೋಟ್ಯಾನ್, ಸಂತೋಷ್ ರಾಯಿ ಬೆಟ್ಟು, ಕೇಶವ ದೈಪಲ, ರಮಾನಾಥ ರಾಯಿ, ಕಾತರ್ಿಕ್ ಬಲ್ಲಾಳ್, ರೊನಾಲ್ಡ್ ಡಿಸೋಜ, ವಸಂತ ಕಕ್ಯಪದವು, ದಿನೇಶ್ ಶೆಟ್ಟಿ ದಂಬೆದಾರ್, ಗಣೇಶ್ ರೈ ಮಾಣಿ, ವಿಜಯ್ ರೈ, ಮೋಹನ್ ಪಿ.ಎಸ್., ಸದಾನಂದ ನಾವೂರ, ಪ್ರಣಾಮ್ ಅಜ್ಜಿಬೆಟ್ಟು ಮತ್ತಿತರರು ಇದ್ದರು.