Published On: Mon, Feb 5th, 2024

ಬಂಟ್ವಾಳ: ಧ್ವಜ ಸ್ತಂಭವನ್ನು ಭುಜದಲ್ಲೇ ಹೊತ್ತು ಮೆರವಣಿಗೆಯಲ್ಲಿ ಸಾಗಿದ ಯುವಕರು

ಬಂಟ್ವಾಳ: ಇಲ್ಲಿಯ‌ ನಂದನಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನಕ್ಕೆ‌ ಸಮರ್ಪಿಸಲಾಗುವ ನೂತನ ಕೊಡಿಮರದ ( ಧ್ವಜ ಸ್ತಂಭ) ವೈಭವದ ಮೆರವಣಿಗೆ ಬಂಟ್ವಾಳ ನಗರದಲ್ಲಿ ಭಾನುವಾರ ಬೆಳಿಗ್ಗೆ ನಡೆಯಿತು.

ದೈವಸ್ಥಾನದ ಆಡಳಿತ‌ ಸಮಿತಿ‌ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಅವರ ಸಾರಥ್ಯದಲ್ಲಿ ನಡೆದ ಮೆರವಣಿಗೆಯಲ್ಲಿ ಕೊಡಿಮರವನ್ನು ಇದೇ ಮೊದಲಿಗೆ 40 ಕ್ಕು ಹೆಚ್ಚು ಮಂದಿ ಯುವಕರು ಭಜದಲ್ಲಿರಿಸಿಕೊಂಡೆ ನಗರ ಪ್ರದಕ್ಷಿಣೆ ಹಾಕಿ ದೈವಸ್ಥಾನಕ್ಕೆ ತಂದರು.

ಬಂಟ್ವಾಳ ತ್ಯಾಗರಾಜ ರಸ್ತೆಯ ಕೀರ್ತಿಶೇಷ ಗುಂಡಿತೋಡಿ ಗಣಪತಿ ಕಾಮತ್ ಅವರ ಮನೆಯವರು ಈ ಕೋಡಿಮರವನ್ನು ದೈವಸ್ಥಾನಕ್ಕೆ ಉಚಿತವಾಗಿ ದಾನ ನೀಡಿದ್ದು, ಅಲ್ಲಿಂದ ತ್ಯಾಗರಾಜ ರಸ್ತೆಯ ಮೂಲಕ ತೆರಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಸಾಗಿ ಅಲ್ಲಿಂದ ವಾಪಾಸ್ ರಥಬೀದಿಯಾಗಿ ಬಂದು ಮಾರ್ಕೆಟ್ ರಸ್ತೆ ಮೂಲಕ ಬಡ್ಡಕಟ್ಟೆ ಹನುಮಾನ್ ದೇವಸ್ಥಾನದವರೆಗೆ ತೆರಳಿತು.

ಅಲ್ಲಿಂದ ವಾಪಸ್ ಅದೇ ರಸ್ತೆಯಾಗಿ ಬಂದು‌ ತ್ಯಾಗರಾಜ ರಸ್ತೆ ಮೂಲಕ ಅಗಮಿಸಿ ದೈವಸ್ಥಾನದಲ್ಲಿ‌ ಸಂಪನ್ನಗೊಂಡಿತು. ಬಳಿಕ ಕ್ಚೇತ್ರದ ತಂತ್ರಿಗಳಾದ ಪೊಳಲಿ ಗಿರಿಪ್ರಕಾಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ವೈಧಿಕ ವಿಧಿವಿಧಾನದೊಂದಿಗೆ ತೈಲಾಧಿವಾಸ ಕಾರ್ಯಕ್ರಮ ನಡೆಯಿತು.

ಕುಣಿತ ಭಜನೆ, ಕೊಂಬು, ಚೆಂಡೆ, ಪೂರ್ಣಕುಂಭ ಕಲಶದೊಂದಿಗೆ ಮಹಿಳೆಯರು ಹೆಜ್ಜೆ ಹಾಕಿದರು.
ಕಣಿಯೂರು ಮಠದ ಶ್ರೀ ಮಹಾಬಲ ಸ್ವಾಮೀಜಿ, ಬಾಳಿಗಾ ಮನೆತನದ ಸುಧೀರ್ ಬಾಳಿಗಾ, ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಕ್ಷೇತ್ರಕ್ಕೆ ಸಂಬಂಧಿಸಿದ ಮನೆತನದ ವಿಶ್ವನಾಥ ಪೂಜಾರಿ ಪೊನ್ನಂಗಿಲಗುತ್ತು, ಸಂಜೀವ ಪೂಜಾರಿ ಪೆಲತ್ತಿಮಾರು, ಲೋಕೇಶ್ ಬಂಗೇರ ಗಾಣದಪಡ್ಪು, ಲೋಕನಾಥ ಪೂಜಾರಿ ಬಡಕೊಟ್ಟು, ಮರವನ್ನು ದಾನಗೈದ ಅವಿನಾಶ್ ಕಾಮತ್, ಪ್ರಮುಖರಾದ ಬಿ.ದೇವದಾಸ ಶೆಟ್ಟಿ, ರಾಮದಾಸ ಬಂಟ್ವಾಳ, ಬಾಬು ಶೆಟ್ಟಿ, ಶಿಲ್ಪಿ ಸದಾಶಿವ ಶೆಣೈ, ರವೀಂದ್ರ ಕಂಬಳಿ, ತಾರನಾಥ ಕೊಟ್ಟಾರಿ ತೇವು, ಭುವನೇಶ್ ಪಚ್ಚಿನಡ್ಕ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಕಾಶ್ ಶೆಟ್ಟಿ ಶ್ರೀ ಶೈಲ, ಅಮ್ಮು ಬಂಟ್ವಾಳ, ವಿಶ್ವನಾಥ ಬಿ., ಸದಾನಂದ ಪೂಜಾರಿ, ದೇವದಾಸ ಅಮೀನ್ ಬಂಟ್ವಾಳ, ಜಯ ಸುವರ್ಣ, ಶಿವಪ್ರಸಾದ್ ಕೊಟ್ಟಾರಿ, ಜಗನ್ನಾಥ ಸಾಲಿಯಾನ್ ತುಂಬೆ, ಅರುಣ್ ಕುಮಾರ್ ಬೊಳ್ಳಾರಿ, ಯೋಗೀಶ್ ಕೋಟ್ಯಾನ್ ತುಂಬೆ, ಸಂತೋಷ್ ಕುಮಾರ್ ತುಂಬೆ, ಶೇಖರ್ ಮಂಡಾಡಿ, ಮಹಾಬಲ ಬಂಗೇರ, ಗೋಪಾಲಕೃಷ್ಣ, ಅಶ್ವಿತ್ ಮೊದಲಾದವರಿದ್ದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter