ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಸಂಪನ್ನ
ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಜ.21 ರಿಂದ ನಡೆಯುತ್ತಿರುವ ಬ್ರಹ್ಮಕಲಶೋತ್ಸವವು ಜ.28ರಂದು ಭಾನುವಾರ ಬ್ರಹ್ಮ ಶ್ರೀ ಸುಬ್ರಹ್ಮಣ್ಯ ತಂತ್ರಿ ಹಾಗೂ ವೆಂಕಟೇಶ್ ತಂತ್ರಿ ಅವರ ನೇತೃತ್ವದಲ್ಲಿ ಕಲಶಾಭಿಷೇಕವು ಬೆಳಿಗ್ಗೆ 7:೦೦ ರಿಂದ ಪ್ರಾರಂಭಗೊಂಡು ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವವು ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಕೊಂಜಾಲುಗುತ್ತು ದಿವಾಕರ ಶೆಟ್ಟಿ, ಅಮುಂಜೆಗುತ್ತು ಯಶೋಧ ಡಿ.ಶೆಟ್ಟಿ, ಅಮುಂಜೆಗುತ್ತು ಸಂತೋಷ್ ಶೆಟ್ಟಿ, ಅಮುಂಜೆಗುತ್ತು ರಂಗನಾಥ್ ಶೆಟ್ಟಿ, ಅಮುಂಜೆಗುತ್ತು ರವೀಂದ್ರ ಶೆಟ್ಟಿ, ಅಮುಂಜೆಗುತ್ತು ಲಕ್ಷ್ಮೀಪ್ರಸಾದ್ ಶೆಟ್ಟಿ, ಡಾ. ಮಂಜಯ್ಯ ಶೆಟ್ಟಿ, ಸತ್ಯಪ್ರಸಾದ್ ಶೆಟ್ಟಿ ಅಮುಂಜೆಗುತ್ತು, ದಕ್ಷರಾಜ್ ಶೆಟ್ಟಿ ಅಮುಂಜೆಗುತ್ತು, ಅಮುಂಜೆಗುತ್ತು ಕೃಷ್ಣಕುಮಾರ ಪೂಂಜ, ಸುದೇಶ್ ರೈ ಬಾರಿಂಜೆ, ಸಂಪತ್ ಕುಮಾರ್ ಶೆಟ್ಟಿ, ದೇವದಾಸ್ ಹೆಗ್ಡೆ ಅಮುಂಜೆಗುತ್ತು, ನಿಕ್ಷಾ ನಾಯ್ಕ್ ಅಮುಂಜೆಗುತ್ತು, ಅಮುಂಜೆಗುತ್ತು ಪ್ರಫುಲ್ಲ ವಿ. ಶೆಟ್ಟಿ, ಅಮುಂಜೆಗುತ್ತು ಜ್ಯೋತಿ ಎ. ಶೆಟ್ಟಿ, ಅಮುಂಜೆಗುತ್ತು ನಾಗವೇಣಿ ಡಿ. ಶೆಟ್ಟಿ, ಅಮುಂಜೆಗುತ್ತು ವನಿತಾ ಎಸ್. ರೈ, ರಕ್ಷಾ ಮಲ್ಲಿ ಅಮುಂಜೆಗುತ್ತು ಉಪಸ್ಥಿತರಿದ್ದರು.

