ದುರ್ಶ್ಕರ್ಮಕ್ಕೆ ದುಷ್ಪಲ ಪ್ರಾಪ್ತಿ, ಸತ್ಕರ್ಮಕ್ಕೆ ಸತ್ಪಲ ಪ್ರಾಪ್ತಿ :ಒಡಿಯೂರು ಶ್ರೀ, ಭವ್ಯ ಭಾರತದ ನಿರ್ಮಾಣದಲ್ಲಿ ರಾಮರಾಜ್ಯದ ಕನಸು ನನಸಾಗಬೇಕು : ನಾಗರಾಜ ಶೆಟ್ಟಿ
ಕೈಕಂಬ: ಅಮ್ಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ 28ರಂದು ಭಾನುವಾರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಆಗಮಿಸಿ ಆಶೀರ್ವಚನದಲ್ಲಿ “ಅಮ್ಮುಂಜೆ ಅಂದರೆ ನೀರು ತುಂಬಿದ ಜಾಗ” ಎಂದು ಹೇಳಿದರು. ಸ್ಕಂದ ಪುರಾಣದ ಕಥೆಗಳಲ್ಲಿ ಕೇದಗೆ ಹೂವಿನ ಕಥೆಯನ್ನು ವಿವರಿಸಿದರು. ನಂತರ ಮಾತನಾಡಿದ ಶ್ರೀಗಳು “ಹುಟ್ಟು ಸಾವಿನ ಮಧ್ಯೆ ಇರುವುದೊಂದೇ ಬದುಕು, ದುರ್ಶ್ಕರ್ಮಕ್ಕೆ ದುಷ್ಪಲ ಪ್ರಾಪ್ತಿ ಸತ್ಕರ್ಮಕ್ಕೆ ಸತ್ಪಲ ಪ್ರಾಪ್ತಿ, ಇರವಿನ ಅರಿವು ಮೂಡಿದಾಗ ಬದುಕು ಸಾರ್ಥಕ” ಎಂದು ನುಡಿದರು.


ಮಾಜಿ ಸಚಿವ ನಾಗರಾಜ ಶೆಟ್ಟಿ ಉಪನ್ಯಾಸದಲ್ಲಿ ಮಾತನಾಡುತ್ತಾ ಹಿಂದೂ ಸಮಾಜ ದೇಶದಲ್ಲಿರುವ ವಿಶಿಷ್ಟ ಶಕ್ತಿ, ಭವ್ಯ ಭಾರತದ ನಿರ್ಮಾಣದಲ್ಲಿ ರಾಮರಾಜ್ಯದ ಕನಸು ನನಸಾಗಬೇಕು ಎಂದರು.

ಮಾಜಿ ಸಚಿವ ರಮಾನಾಥ ರೈ ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು.

ವೇದಿಕೆಯಲ್ಲಿ ಅಮ್ಮುಂಜೆಗುತ್ತು ದಿವಾಕರ ಶೆಟ್ಟಿ, ಯಶೋದಾ ಡಿ. ಶೆಟ್ಟಿ ಆಮ್ಮುಂಜೆಗುತ್ತು, ಚಂದ್ರಹಾಸ ಶೆಟ್ಟಿ ಪಲ್ಲಿಪಾಡಿ, ಪ್ರಭಾಕರ ಶೆಟ್ಟಿ, ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಅಮುಂಜೆಗುತ್ತು ರವೀಂದ್ರ ಶೆಟ್ಟಿ, ಮುಂಬೈ ಉದ್ಯಮಿ ವಿವೇಕ್ ಶೆಟ್ಟಿ, ಕೃಷ್ಣಕುಮಾರ್ ಪೂಂಜ ಅಮುಂಜೆಗುತ್ತು ಉಪಸ್ಥಿತರಿದ್ದರು.









