ನಂದಿಕೂರು ವತಿಯಿಂದ ಸೋಮನಾಥೇಶ್ವರ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ
ಕೈಕಂಬ: ನಂದಿಕೂರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಜುಕೇಷನ್ ಟ್ರಸ್ಟ್ ನಂದಿಕೂರು ವತಿಯಿಂದ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಿಸಿದರು.
ಜ.24ರಂದು ಬುಧವಾರ ನಂದಿಕೂರು ಸರಕಾರಿ ಹಿ. ಪ್ರಾ. ಶಾಲೆ ಹಾಗೂ ಎಜುಕೇಷನ್ ಟ್ರಸ್ಟ್ ವತಿಯಿಂದ ಅಮುಂಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹೊರೆ ಕಾಣಿಕೆಯನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಶೆಟ್ಟಿ ಅರಂತಾಡಿ, ಪ್ರಕಾಶ್ ಶೆಟ್ಟಿ ಮಗಂದಾಡಿ, ಸಾಯಿನಾಥ್ ಶೆಟ್ಟಿ, ಅನಿಲ್ ಶೆಟ್ಟಿ ಏಳಿಂಜೆ, ಬಾಲಕೃಷ್ಣ ಶೆಟ್ಟಿ, ಅರುಣ್ ಶೆಟ್ಟಿ, ನಾಗರಾಜ್ ರಾವ್, ಭುವನಾಭಿರಾಮ ಉಡುಪ ಕಿನ್ನಿಗೋಳಿ, ಶ್ರೀ ಸೋಮನಾಥೇಶ್ವರ ದೇವಸ್ಥಾನದ ಗೌರವಾಧ್ಯಕ್ಷ ಕೊಂಜಾಲುಗುತ್ತು ದಿವಾಕರ ಶೆಟ್ಟಿ, ಅಮುಂಜೆಗುತ್ತು ಡಾ. ಮಂಜಯ್ಯ ಶೆಟ್ಟಿ, ಅಧ್ಯಕ್ಷೆ ಅಮುಂಜೆಗುತ್ತು ಯಶೋಧ ಡಿ.ಶೆಟ್ಟಿ, ಕಾರ್ಯಾಧ್ಯಕ್ಷ ಕೆ. ಕೃಷ್ಣಕುಮಾರ ಪೂಂಜ, ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಟ್ಟಿ ಅಮುಂಜೆಗುತ್ತು, ಕೋಶಾಧಿಕಾರಿ ಸಿ. ಎ ಸುದೇಶ್ ಕುಮಾರ್ ರೈ ಬರಿಂಜೆ, ಜೊತೆ ಕೋಶಾಧಿಕಾರಿ ಅಮ್ಮುಂಜೆಗುತ್ತು ನಿಕ್ಷಾ ನಾಯ್ಕ್ ಉಪಸ್ಥಿತರಿದ್ದರು.