ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಜ.೨೨ರಂದು ದೀಪೋತ್ಸವ: ಭವ್ಯ ಶ್ರೀ ರಾಮ ಮಂದಿರ ಲೋಕಾರ್ಪಣೆಯ ಸಂಭ್ರಮಾಚರಣೆ
ಕೈಕಂಬ: ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಜ.೨೨ ಸೋಮವಾರದಂದು ಅಯೋಧ್ಯ ಶ್ರೀರಾಮ ಲಲ್ಲಾರ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ದೇವಸ್ಥಾನವನ್ನು ದೀಪಗಳಿಂದ ಅಲಂಕರಿಸಿ ದೀಪೋತ್ಸವ ಆಚರಿಸಿ ಶ್ರೀ ರಾಮ ನಾಮ ಸಂಕೀರ್ತನೆ ಹಾಡಿದರು. ತಾಯಿ ಶ್ರೀ ಆದಿಶಕ್ತಿಗೆ ವಿಶೇಷ ರಂಗಪೂಜೆ ನೆರವೇರಿತು.
ಶ್ರೀ ಆದಿಶಕ್ತಿ ಭಜನಾ ಮಂಡಳಿ, ಆದಿಶಕ್ತಿ ಮಾತೃ ಭಜನಾ ಮಂಡಳಿ ಹಾಗೂ ಶ್ರೀ ಕಾವೇಶ್ವರ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ನಡೆಯಿತು.
ಬಳಿಕ ಉತ್ತರ ದಿಕ್ಕಿನ ಕಡೆಗೆ ಮುಖಮಾಡಿ ಶ್ರೀ ರಾಮ ಲಲ್ಲಾರನ್ನು ಮನದಲ್ಲಿ ನೆನೆಯುತ್ತಾ ಮಹಿಳೆಯರು ಆರತಿ ಮಾಡುವಾಗ ನೆರೆದಿದ್ದ ಜನರು ರಾಮ ತಾರಕ ಮಂತ್ರ ಪಠಣೆ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾದಿಕಾರಿ, ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ಸದಸ್ಯರು, ದೇವಸ್ಥಾನದ ಅರ್ಚಕರು, ರಾಮ ಭಕ್ತರು ಹಾಗೂ ಊರಿನ ಪರಊರಿನ ಜನರು ಅದ್ಭುತ ಕ್ಷಣಕ್ಕೆ ಸಾಕ್ಷಿಯಾದರು. ಬಳಿಕ ವಿಶೇಷವೆಂಬಂತೆ ನೆಲದಲ್ಲಿ ಕುಳಿತು ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.