ಅಯೋಧ್ಯೆಯ ಶ್ರೀರಾಮ ಲಲ್ಲಾ ನ ಪ್ರಾಣ ಪ್ರತಿಷ್ಠಾಪನೆಯ ಶುಭಸಂದರ್ಭ ಕಣ್ತುಂಬಿ ಕೊಂಡ ಊರಿನ ಜನತೆ
ಕೈಕಂಬ: ಶ್ರೀ ರಾಜರಾಜೇಶ್ವರೀ ಸನ್ನಿಧಾನದ ಪಕ್ಕದ ಹಾಲ್ ನಲ್ಲಿ ಜ.22ರಂದು ಸೋಮವಾರ ವಿವೇಕ ವೇದಿಕೆ ರಾಮಕೃಷ್ಣ ತಪೋವನ ಪೊಳಲಿ ಇದರ ಸoಯೋಗದಲ್ಲಿ ನಡೆದ “ಶ್ರೀ ರಾಮ ತಾರಕ ಯಜ್ಞ” ದಲ್ಲಿ ಊರಿನ ಹಾಗೂ ಪರ ಊರಿನ ಜನರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಎಲ್. ಇ. ಡಿ ಪರದೆಯಲ್ಲಿ ಅಯೋಧ್ಯೆಯಿಂದ ಶ್ರೀ ರಾಮ ಲಲ್ಲಾರ ವಿಗ್ರಹ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ವೀಕ್ಷಿಸಲು ತಯಾರಿ ಮಾಡಲಾಗಿತ್ತು.
500 ವರ್ಷಗಳ ಸತತ ಹೋರಾಟದ ಬಳಿಕ ಇದೀಗ ಶ್ರೀ ರಾಮ ನ ಭವ್ಯ ಮಂದಿರ ಉದ್ಘಾಟನೆ ನೆರವೇರಿತು.
ಮದ್ಯಾಹ್ನ 12: 29 ಕ್ಕೆ ಶ್ರೀ ರಾಮ ಲಲ್ಲಾರ ಮೂರುತಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಪ್ರಾಣ ಪ್ರತಿಷ್ಠಾಪನೆಯು ನೆರವೇರಿತು.
ಪರದೆಯಲ್ಲಿ ಶ್ರೀ ರಾಮ ಲಲ್ಲಾರ ದರ್ಶನವಾದೊಡನೆ ಭಾವೋದ್ವೇಗದಿಂದ ನೆರೆದಿದ್ದ ಜನರಿಂದ ಜೈ ಶ್ರೀ ರಾಮ್ ಎಂಬ ಘೋಷ ವಾಕ್ಯ ಮೊಳಗಿದವು.
ಹಲವಾರು ಭಕ್ತರು ಶ್ರೀ ರಾಮನ ಬಾಲ ರೂಪವನ್ನು ಕಂಡು ಭಾವುಕರಾದರು.
ಈ ಸಂದರ್ಭದಲ್ಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ, ಶಾಸಕ ರಾಜೇಶ್ ನಾಯ್ಕ್, ಪೋಲಾಲಿ ಕ್ಷೇತ್ರದ ಅರ್ಚಕರು, ಊರಿನ ಪರವೂರಿನ ಭಕ್ತರು ಅದ್ಭುತ ಕಾರುಣ್ಯ ಮೂರ್ತಿಯನ್ನು ಕಣ್ತುಂಬಿಕೊಂಡರು.