ಪೊಳಲಿಯಲ್ಲಿ “ಶ್ರೀ ರಾಮ ತಾರಕ ಯಜ್ಞ”
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನ ಹಾಗೂ ವಿವೇಕ ವೇದಿಕೆಯ ಸಂಯೋಜನೆಯಲ್ಲಿ ಪೂಜ್ಯ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಜ.೨೨ರಂದು ಸೋಮವಾರ ಅಯೋಧ್ಯೆಯ ಶ್ರೀ ರಾಮ ಮಂದಿರದ ಉದ್ಘಾಟನೆಯ ಪ್ರಯುಕ್ತ “ಶ್ರೀ ರಾಮತಾರಕ ಯಜ್ಞ” ನಡೆಯಲಿರುವುದು.
ಡಿ.೫ರಂದು ೧೦೮ಕೋಟಿ ಜಪ ಯಜ್ಞ ಮಾಡಬೇಕೆಂದು ಸಂಕಲ್ಪ ಮಾಡಿ ರಾಮಕೃಷ್ಣ ತಪೋವನದಲ್ಲಿ ೧೭೦೦ಕ್ಕೂ ಹೆಚ್ಚು ಜಪಮಾಲೆಗಳನ್ನು ರಾಮಕೃಷ್ಣ ತಪೋವನದಲ್ಲಿ ಭಕ್ತರಿಗೆ ವಿತರಿಸಲಾಗಿತ್ತು ಆದ್ದರಿಂದ ಶ್ರೀ ರಾಮ ತಾರಕ ಮಂತ್ರದ ಪಠಣೆ ಮಾಡುತ್ತಿರುವ ಎಲ್ಲರೂ ೨೨ರಂದು ಸೋಮವಾರ ಶ್ರೀ ಕ್ಷೇತ್ರ ಪೊಳಲಿಯಲ್ಲಿ ನಡೆಯುವ “ಶ್ರೀ ರಾಮ ತಾರಕ ಯಜ್ಞ”ದಲ್ಲಿ ಪಾಲ್ಗೊಳ್ಳಬೇಕು ಹಾಗೂ ಅಲ್ಲಿಯವರೆಗೆ ಶ್ರೀ ರಾಮ ತಾರಕ ಮಂತ್ರ ಪಠಣೆ ಮುಂದುವರಿಸಬೇಕೆಂದು ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.