ಬಂಟ್ವಾಳ ಬಿಜೆಪಿ ಕಚೇರಿಗೆ ಎಂಎಲ್ ಸಿ ಭೇಟಿ
ಬಂಟ್ವಾಳ: ಕರ್ನಾಟಕ ವಿಧಾನಪರಿಷತ್ ಸದಸ್ಯ ಡಾಕ್ಟರ್ ತಳವಾರ ಸಾಬಣ್ಣಾ ಅವರು ಶುಕ್ರವಾರ ಬಿ.ಸಿ.ರೋಡ್ ನಲ್ಲಿರುವ ಬಿಜೆಪಿ ಕಛೇರಿಗೆ ಭೇಟಿ ನೀಡಿದರು.

ಈ ಸಂಧರ್ಭದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿಯವರು ವಿ.ಪ.ಸದಸ್ಯ ತಳವಾರು ಅವರನ್ನು ಶಾಲು ಹಾಕಿ ಸ್ವಾಗತಿಸಿದರು. ಈ ಸಂದರ್ಭ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಪಕ್ಷದ ಪ್ರಮುಖರಾದ ವಿಕಾಸ್ ಪುತ್ತೂರು,
ಮೋನಪ್ಪ ದೇವಸ್ಯ, ರಮೇಶ್ ರಾವ್ ಮಂಚಿ ಉಪಸ್ಥಿತರಿದ್ದರು.