ತುಂಬೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಧ್ವಜಸ್ಥಂಭ ಪ್ರತಿಷ್ಠೆ
ಬಂಟ್ವಾಳ: ತುಂಬೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಜ.2ಂ ರಂದು ಶನಿವಾರ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರ ನೇತ್ರತ್ವದಲ್ಲಿ ಧ್ವಜಸ್ಥಂಭ ಪ್ರತಿಷ್ಠೆ (ನಿಕ್ಷೇಪಣಾ) ಕಾರ್ಯಕ್ರಮ ನಡೆಯಿತು.

ಫೆ.13 ರಿಂದ ಫೆ 23 ರ ವರೆಗೆ ತುಂಬೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಪುನ: ಪ್ರತಿಷ್ಠೆ ಅಷ್ಟಬಂಧ, ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರಮಹೋತ್ಸವ ಕಾರ್ಯಕ್ರಮ ನಡೆಯಲಿದೆ.
ಇದರ ಪೂರ್ವಭಾವಿಯಾಗಿ ಜ.20ರಂದು ಶನಿವಾರ ದೇವಸ್ಥಾನದಲ್ಲಿ ಧ್ವಜಸ್ಥಂಭ ಪ್ರತಿಷ್ಠೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ಶೆಡ್ಯೆ ಮಂಜುನಾಥ ಭಂಡಾರಿ, ಕಾರ್ಯದರ್ಶಿ ಜೀವನ್ ಆಳ್ವ ತುಂಬೆ ಗುತ್ತು ಜೊತೆ ಕಾರ್ಯದರ್ಶಿ ಉಮೇಶ್ ಸುವರ್ಣ ತುಂಬೆ, ಬ್ರಹ್ಮಕಲಶೋತ್ಸವ ಉಪಾಧ್ಯಕ್ಷರುಗಳಾದ ಶ್ರೀಧರ್ ರಾವ್ ತುಗುರು, ಗೋಪಾಲಕೃಷ್ಣ ಸುವರ್ಣ ತುಂಬೆ, ನವೀನ್ ಶೆಟ್ಟಿ ತುಂಬೆ,
ಜೊತೆ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಶ್ರೀ ಶೈಲ, ಗಣೇಶ್ ಸುವರ್ಣ ತುಂಬೆ, ಸೇವಾ ಸಮಿತಿ ಅಧ್ಯಕ್ಷ ಅರುಣ್ ಅಳ್ವ ತುಂಬೆ ಗುತ್ತು, ಪ್ರಚಾರ ಸಮಿತಿ ಸಂಚಾಲಕ ಪ್ರವೀಣ್ ಬಿ.ತುಂಬೆ, ಸೇವಾ ಸಮಿತಿ ಸದಸ್ಯರಾದ ಗಣೇಶ್ ಸಾಲಿಯಾನ್ ತುಂಬೆ, ಉಮೇಶ್ ರೆಂಜೊಡಿ, ದೇವದಾಸ್ ಪರ್ಲಕ್ಕೆ, ಪ್ರಮುಖರಾದ ರಾಮಚಂದ್ರ ಸುವರ್ಣ, ಸದಾಶಿವ ಡಿ.ತುಂಬೆ, ವೈದಿಕ ಸಮಿತಿ ಉಪಸಂಚಾಲಕ ರಮೇಶ್ ಮಯ್ಯ, ಹಿರಿಯರಾದ ತುಂಬೆ ಗುತ್ತು ಬಾಲಕೃಷ್ಣ ಶೆಟ್ಟಿ, ಎಂ.ಆರ್.ನಾಯರ್, ದೇವದಾಸ್ ಶೆಟ್ಟಿ ತುಂಬೆ ಗುತ್ತು, ಉಗ್ರಾಣ ಸಮಿತಿ ಸಂಚಾಲಕ ಮೋನಪ್ಪ ಮಜಿ, ಪುರಸಭಾ ಸದಸ್ಯ ಲೋಲಾಕ್ಷ ಶೆಟ್ಟಿ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಭಾರತಿ ಶ್ರೀಧರ್ ರಾವ್, ಮಹಿಳಾ ಸಮಿತಿ ಪದಾಧಿಕಾರಿಗಳು
ಕೊಡಿ ಮರ ದಾನಿ ಸವಿತಾ ಜಗನ್ನಾಥ ಶೆಟ್ಟಿ ತುಂಬೆ ಗುತ್ತು, ಅರ್ಚಕ ಅಭಿಲಾಷ್ ಭಟ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.