“ರಾಷ್ಟ್ರೀಯ ಯುವ ದಿನಾಚರಣೆ” ಪ್ರಯುಕ್ತ ಮೆರವಣಿಗೆ ಜಾಥಾ
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಪರಮ ಪೂಜನೀಯ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಜ.12ರಂದು ಶುಕ್ರವಾರ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಮೆರವಣಿಗೆ ಜಾಥಾ ನಡೆಯಿತು.
ಇದರ ಅಂಗವಾಗಿ ಜ.12ರಂದು ಬೆಳಗ್ಗೆ 8.15 ಗೆ ಪೊಳಲಿಯಿಂದ ಅಡ್ಡೂರಿನವರೆಗೆ ಮೆರವಣಿಗೆ ಜಾಥಾ ನಡೆಯಿತು. ಮೆರವಣಿಗೆಯಲ್ಲಿ 12 ಶಾಲೆಗಳ ಮಕ್ಕಳು ಭಾಗವಹಿಸಿದರು. ಬಳಿಕ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.