ವರಕೋಡಿಯಲ್ಲಿ ೧೯ನೇ ವರ್ಷದ ಕಲಾ ಸೇವೆಯ ಪ್ರಯುಕ್ತ ಯಕ್ಷಗಾನ ಬಯಲಾಟ
ಕೈಕಂಬ: ಯಕ್ಷಕಲಾ ಸಂಘ(ರಿ) ವರಕೋಡಿ ಯಕ್ಷದಾಮ ಬಡಗಬೆಳ್ಳೂರು ಇದರ ೧೯ನೇ ವರ್ಷದ ಕಲಾ ಸೇವೆಯ ಅಂಗವಾಗಿ ಜ.೧೪ರಂದು ಭಾನುವಾರ ರಾತ್ರಿ ೯:೩೦ಕ್ಕೆ ಯಕ್ಷಕಲಾ ಸಂಘದ ಕಟ್ಟಡ ಯಕ್ಷಧಾಮ ವಠಾರದಲ್ಲಿ ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರಿಂದ ವಸಂತ ಬಂಟ್ವಾಳ ವಿರಚಿತ “ಬೊಳ್ಳಿ ತೊಟ್ಟಿಲ್” ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಯಕ್ಷಕಲಾ ಸಂಘ ವರಕೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.