ನೆಟ್ಲ ದೇವಸ್ಥಾನ ವಠಾರದಲ್ಲಿ ಸ್ವಚ್ಚತಾ ಕಾರ್ಯ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯದ ಗೋಳ್ತಮಜಲ್ ‘ಬಿ’ ಒಕ್ಕೂಟದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಗೋಳ್ತಮಜಲು ಗ್ರಾಮದ ನೆಟ್ಲ ನಿಟಿಲೇಶ್ವರ ದೇವಸ್ಥಾನದಲ್ಲಿ ನಡೆಸಲಾಯಿತು.
ಒಕ್ಕೂಟದ ಸದಸ್ಯರುಗಳು ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆ ಮಾಡಿದರು. ಸ್ವಚ್ಛತಾ ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಶೆಟ್ಟಿ
ಉದ್ಘಾಟಿಸಿದರು.
ದೇವಸ್ಥಾನದ ಮೆನೇಜರ್ ನವೀನ್ ಯನ್, ಪಂಚಾಯತ್ ಸದಸ್ಯರಾದ ಹರೀಣಾಕ್ಷಿ, ಸವಿತಾ ಉಪಸ್ಥಿತರಿದ್ದರು. ರೋಹಿಣಿ ಯನ್ ಸ್ವಾಗತಿಸಿ, ಸೇವಾಪ್ರತಿನಿಧಿ ಸುಕನ್ಯಾ ಪ್ರಸ್ತಾವಿಸಿದರು. ಪ್ರೇಮ ವಂದಿಸಿದರು. ಅರುಣಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು