ಬಂಟ್ವಾಳ: ತಾಲೂಕಿನ ಕುಕ್ಕಿಪಾಡಿ ಗ್ರಾಮದ ಭವತಿ ಬಿಕ್ಷಾಂ ದೇಹಿ ಬಡವರ ಬಂಧು ಸೇವಾ ತಂಡದ ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗೂ 10ನೇ ಸೇವಾ ಯೋಜನೆಯ ಪ್ರಯುಕ್ತ ತುಳುನಾಡ ರಕ್ಷಣಾ ವೇದಿಕೆ (ರಿ.) ವಾಮದಪದವು ಘಟಕ, ಸೂಕ್ತ ನ್ಯೂಸ್ ಸಿದ್ದಕಟ್ಟೆ, ಟೀಮ್ ಒಳಿತು ಮಾಡು ಮನುಷ ಸೇವಾ ತಂಡ ಪುತ್ತೂರು, ತೆಲಿಕೆದ ಕಲಾವಿದೆರ್ ಕೊಯಿಲ ಇವುಗಳ ಸಂಯುಕ್ತಾಶ್ರಯದಲ್ಲಿ ಅನಾರೋಗ್ಯ ಪೀಡಿತರ ಚಿಕಿತ್ಸಾ ವೆಚ್ಚ, ಆಶ್ರಮ ವಾಸಿಗಳಿಗೆ ಅನ್ನದಾನ ಸಹಾಯಾರ್ಥವಾಗಿ ಬಡವರ ಬಂಧು ಸಹಾಯನಿಧಿ ಕಾರ್ಯಕ್ರಮ ನಡೆಯಿತು.

ತುಳು ರಂಗಭೂಮಿ ಕಲಾವಿದ, ದೈವರಾಧಕ ಸತೀಶ್ ಬಂದಲೆ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ
ಮುಡಿಗೆ ಅಕ್ಕಿ ಸುರಿದು 10 ನೇ ಸೇವಾ ಯೋಜನೆಗೆ ಚಾಲನೆ ನೀಡಲಾಯಿತು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ. ತುಂಗಪ್ಪ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಕಾರ್ಕಳ ಸುರಕ್ಷಾ ಸೇವಾಶ್ರಮದ ಸಂಸ್ಥಾಪಕಿ ಆಯಿಷಾ, ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಧವ ಪರವ, ದೈವ ಪಾತ್ರಿ ಪ್ರವೀಣ್ ಪೂಜಾರಿ, ಕಲಾವಿದ ಅಶೋಕ್ ಹಲಾಯಿ ಇವರನ್ನು ಸನ್ಮಾನಿಸಲಾಯಿತಲ್ಲದೆ ಅಶಕ್ತ ಕುಟುಂಬಗಳಿಗೆ ಅಕ್ಕಿ ವಿತರಿಸಲಾಯಿತು.
ಹಾಗೆಯೇ “ಗೆಂದಗಿಡಿ” ನಾಟಕ ತಂಡದ ಕಲಾವಿದರು ಹಾಗೂ ಸಹಾಯಕರಿಗೆ ಬಂಟ್ವಾಳ ಸೂರ್ಯ ಕ್ಯಾಂಟೀನ್ ಮಾಲಕ ಸದಾನಂದ ಪೂಜಾರಿ ಅವರು ಕೊಡುಗೆಯಾಗಿ ಟೀಶಟ್೯ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಋಣಮುಕ್ತ ಹೋರಾಟ ಸಮಿತಿಯ ರಾಜ್ಯಧ್ಯಕ್ಷ ಬಿ. ಎಂ ಭಟ್, ಮೈಕಲ್ ಡಿಕೋಸ್ತಾ ಸಿದ್ದಕಟ್ಟೆ, ನಿತ್ಯಾನಂದ ಪೂಜಾರಿ ಕೆಂತಲೆ, ರೆವೆರೆನ್ ಫಾ. ಕಿರಣ್ ಪಿಂಟೋ, ಶೋಭಾ ಚೇತನ್, ಹರೀಂದ್ರ ಪೈ, ಲಾದ್ರು ಮೆನೇಜಸ್, ಅಶೋಕ್ ಹಲಾಯಿ, ಹರೀಶ್ ಪೂಜಾರಿ ಕುದ್ಕೋಳಿ, ಯೋಗೀಶ್ ಪಿ. ಕೋಟ್ಯಾನ್, ಸುರೇಶ್ ಶೆಟ್ಟಿ ಮಾವಿನಕಟ್ಟೆ, ವಿಶ್ವನಾಥ ಪಂಡಿತ್, ಲಿಂಗಪ್ಪ ಪೂಜಾರಿ ಹಲಾಯಿ, ಯೋಗೀಶ್ ಪಿ. ಕೋಟ್ಯಾನ್, ವನಿತಾ, ನಾಗೇಶ್ ಎಂ ಉಪಸ್ಥಿತರಿದ್ದರು.
ಪ್ರದೀಪ್ ಪೂಜಾರಿ ಕುಕ್ಕಿಪಾಡಿ ಸ್ವಾಗತಿಸಿದರು. ಗುರುರಾಜ್ ಕುಕ್ಕಿಪಾಡಿ ಪ್ರಸ್ತಾವನೆಗೈದರು, ತುಳಸಿ ಬಂಟ್ವಾಳ ವಂದಿಸಿದರು. ಪುರುಷೋತ್ತಮ ಕೊಯಿಲ, ದಿನೇಶ್ ಕನಪಾದೆ ಕಾರ್ಯಕ್ರಮ ನಿರೂಪಿಸಿದರು.
ಸೇವಾ ಯೋಜನೆಯ ಸಹಾಯರ್ಥವಾಗಿ ಗೆಂದಗಿಡಿ ನಾಟಕ ಪ್ರದರ್ಶನಗೊಂಡಿತು.
