Published On: Mon, Dec 25th, 2023

ಫರಂಗಿಪೇಟೆ: “ವರ್ಣಾಂಜಲಿ” ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ, ಕಲಾ ಸಾಹಿತ್ಯಗಳು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸುತ್ತದೆ: ಏರ್ಯ ಬಾಲಕೃಷ್ಣ ಹೆಗ್ಡೆ

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಇದರ ಆಶ್ರಯದಲ್ಲಿ “ವರ್ಣಾಂಜಲಿ” ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಉದ್ಘಾಟನಾ ಸಮಾರಂಭವು ಡಿ.24ರಂದು ರವಿವಾರ ಬೆಳಿಗ್ಗೆ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ಏರ್ಯ ಆಳ್ವ ಪೌಂಡೇಷನ್ ನ ಏರ್ಯ ಬಾಲಕೃಷ್ಣ ಹೆಗ್ಡೆ, ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಚಿತ್ರಕಲೆ, ಸಂಗೀತ, ಸಾಹಿತ್ಯ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸಿಕೊಡುತ್ತದೆ, ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ ಶಿಕ್ಷಣ ಅಗತ್ಯವಾಗಿದ್ದು, ಕಲಾ ಪ್ರಾಕಾರಗಳಿಗೆ ಪ್ರಾಮುಖ್ಯತೆ ಸಿಗಬೇಕು, ಸಾವಿರಾರು ಮಕ್ಕಳಿಗೆ ಸೇವಾಂಜಲಿ ಪ್ರತಿಷ್ಠಾಪನದ ಮೂಲಕ ಸ್ಪೂರ್ತಿ ಸಿಗಲಿ ಎಂದು ಶುಭ ಹಾರೈಸಿದರು.

ಅತಿಥಿಗಳಾಗಿ ಬಿ. ರಾಮಚಂದ್ರ ರಾವ್ ನಿವೃತ್ತ ಶಿಕ್ಷಕರು ಬಿ.ಸಿ.ರೋಡು ಹಾಗೂ ಮಹಾಬಲೇಶ್ವರ ಹೆಬ್ಬಾರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ ಪೂಂಜ ಪ್ರಾಸ್ತವಿಕವಾಗಿ ಮಾತನಾಡಿ ಪ್ರತಿ ವರ್ಷ ಕೂಡ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಸಂಘಟಿಸುವುದಾಗಿ ಹೇಳಿದರು .

ಮಧ್ಯಾಹ್ನ ನಡೆದ ಸ್ಪರ್ಧಾ ವಿಜೇತರ ಬಹುಮಾನ ವಿತರಣ ಕಾರ್ಯಕ್ರಮದಲ್ಲಿ ಚಿತ್ರಕಲಾ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ ಮಂಚಿ, ಪೆರ್ಮುದೆ ಮೋಹನ್ ಕುಮಾರ, ಮುರಳಿಧರ ಪೊಳಲಿ, ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ, ಸಾಮಾಜಿಕ ಕಾರ್ಯಕರ್ತ ಮನೋಜ್ ತುಪ್ಪಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಮುಖರಾದ ಅರ್ಜುನ್ ಪೂಂಜ, ಸುಕೇಶ್ ಶೆಟ್ಟಿ ತೇವು, ದೇವದಾಸ ಅರ್ಕುಳ, ದಿನೇಶ ತುಂಬೆ, ವಿಕ್ರಂ ಬರ್ಕೆ, ಪ್ರಶಾಂತ್ ತುಂಬೆ, ಪ್ರವೀಣ್ ಕಬೇಲ, ಉಮೇಶ್ ಕೊಳಂಬೆ ಮತ್ತಿತರರು ಉಪಸ್ಥಿತರಿದ್ದರು.

ಸುಮಾರು 400ಕ್ಕೂ ಹೆಚ್ಚು ಮಕ್ಕಳು ಚಿತ್ರಕಲಾ ಸ್ಪರ್ಧೆಯಲ್ಲಿ ಸಂಭ್ರಮದಿಂದ ಭಾಗವಹಿಸಿದ್ದು, ಎಲ್ಲರಿಗೂ ಪ್ರಶಸ್ತಿ ಪತ್ರ ಹಾಗೂ ಏರ್ಯ ಆಳ್ವ ಪೌಂಡೇಷನ್ ವತಿಯಿಂದ ಕಲರ್ ಪೆನ್ಸಿಲ್ ಬಾಕ್ಸ್ ವಿತರಿಸಲಾಯಿತು.

ಸ್ಪರ್ಧಾ ವಿಜೇತರ ವಿವರ:
ಕಿರಿಯ ವಿಭಾಗ ಪ್ರಥಮ :ನಿಹಾರಿಕಾ, ದ್ವಿತೀಯ :ಅಂಕಿತ ಶರ್ಮ, ತೃತೀಯ :ಕೃತಿ ಸಾಲ್ಯಾನ್, ಸಮದಾನಕರ ಬಹುಮಾನ : ಸಾರಾ ಶಾಹಿನಾ, ಪ್ರಣಮ್ಯ ಸುವರ್ಣ

ಹಿರಿಯ ವಿಭಾಗ ಪ್ರಥಮ: ಸ್ಪಂದನ, ದ್ವಿತೀಯ:ನಿನಾದ್, ತೃತೀಯ:ಮನ್ವಿತ್, ಸಮದಾನಕರ ಬಹುಮಾನ: ರಿಷಿಕ್, ನಿಹಾಲ್

ಪ್ರೌಢಶಾಲೆ ವಿಭಾಗ :ಪ್ರಥಮ :ಕೀರ್ತನ್, ದ್ವಿತೀಯ :ಸಮೀಕ್ಷಾ, ತೃತೀಯ :ಅನ್ವಿತ್, ಸಮಾಧಾನಕರ ಬಹುಮಾನ : ಸುಕನ್ಯಾ, ರೀತಿಶ ಕೆ ಜೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter