ಬಂಟ್ವಾಳ: ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಗೆ ಕಟ್ಟಲಾದ ಹೊಸಸೇತುವೆಯ ಸಮೀಪ ಬಾಲಕರಿಬ್ಬರು ಸ್ನಾನ ಮಾಡಲು ಬಂದಿದ್ದು ಈ ಪೈಕಿ ಒಬ್ಬ ಬಾಲಕ ಮೃತಪಟ್ಟ ಘಟನೆ ನ.29ರಂದು ಶನಿವಾರ 3.30ಕ್ಕೆ ನಡೆದಿದೆ. ಮೃತರನ್ನು ಬಿ.ಸಿ.ರೋಡ್ ಸಮೀಪದ ಗಾಣದಪಡ್ಪು ಬಾಡಿಗೆ ಮನೆ ನಿವಾಸಿ ಶೇಖರ ಆಚಾರ್ಯ ಎಂಬವರ ಪುತ್ರ ಶರತ್ ಕುಮಾರ್(15) ಎಂದು ಗುರುತಿಸಲಾಗಿದೆ.
ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಯಾಗಿದ್ದ ಶರತ್ ತನ್ನ ಸ್ನೇಹಿತ ಪ್ರಜ್ವಲ್ ಜೊತೆಗೆ ಶನಿವಾರ ಮಧ್ಯಾಹ್ನ ಸುಮಾರು ಮೂರೂವರೆ ಗಂಟೆಗೆ ಮನೆಯಿಂದ ಬಂದಿದ್ದರು ಎನ್ನಲಾಗಿದೆ. ಈಜಲು ಬಾರದೆ ಮರಳಿನಲ್ಲಿ ಕಾಲುಜಾರಿ ನದಿನೀರಿನ ಸೆಳೆತಕ್ಕೆ ಸಿಲುಕಿದ ಶರತ್ ಮುಳುಗುತ್ತಿದ್ದಂತೆಯೇ ಜೊತೆಗಿದ್ದ ಪ್ರಜ್ವಲ್ ಬೊಬ್ಬೆ ಹಾಕಿದ್ದಾರೆ. ತಕ್ಷಣವೇ ಮೇಲ್ಸೇತುವೆ ಬಳಿ ಹೋಗುತ್ತಿದ್ದ ವಿನೋದ್ರಾಜ್ ಮತ್ತಿತರರು ಧಾವಿಸಿ ಶರತ್ನನ್ನು ಮೇಲೆತ್ತಿದ್ದು, ಅಷ್ಟರಲ್ಲಿ ಆತನು ಮೃತಪಟ್ಟಿದ್ದರು ಎಂದು ನಗರ ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ನಗರ ಠಾಣೆಯ ಇನ್ ಸ್ಪೆಕ್ಟರ್ ಕೆ ಯು ಬೆಳ್ಳಿಯಪ್ಪ ಸ್ಥಳಕ್ಕೆ ಆಗಮಿಸಿ ತನಿಕೆ ನಡೆಸುತ್ತಿದ್ದಾರೆ . ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಸಾಗಿಸಲಾಗಿದೆ.
ಚಿತ್ರ: ಕಿಶೋರ್ ಪೆರಾಜೆ





