ಬಂಟ್ವಾಳ; ಯಾರೋ ದುಷ್ಕರ್ಮಿಗಳು ಎರಡು ಅಂಗಡಿಗಳನ್ನು ಧ್ವಂಸಗೊಳಿಸಿದ ಘಟನೆ ಸಿದ್ದಕಟ್ಟೆಯ ಜಂಕ್ಷನ್ ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಇಲ್ಲಿನ ಫೆಲಿಕ್ಸ್ ಮೊಂತೆರೋ ಎಂಬವರಿಗೆ ಸೇರಿದ ದಿನಸಿ ಅಂಗಡಿ ಹಾಗೂ ಕುಮಾರ ಗೌಡ ಎಂಬವರಿಗ ಹೂವಿನ ಅಂಗಡಿ ಕಿಡಿಗೇಡಿಗಳಿಂದ ಧ್ವಂಸಗೊಂಡಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಎರಡು ಅಂಗಡಿಗಳು ಕಳೆದ ಹಲವು ವರ್ಷಗಳಿಂದ ಸಿದ್ದಕಟ್ಟೆ ಪೇಟೆಯಲ್ಲಿ ಕಾ ರ್ಯಚರಿಸುತ್ತಿದ್ದು, ನಿನ್ನೆ ರಾತ್ರಿ ನಡೆದ ಈ ಘಟನೆ ಈ ಅಂಗಡಿ ಮಾಲಕರಿಗೆ ಆಘಾತ ತಂದಿದೆ. ಈ ಅಂಗಡಿಗಳ ಹಿಂದಿಒನ ಜಮೀನಿನಲ್ಲಿ ಶುಕ್ರವಾರಷ್ಟೇ ಹೊಸದೊಂದು ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದ್ದು, ಧ್ವಂಸಕ್ಕೊಳಗಾದ ಅಂಗಡಿ ಮಾಲೀಕರು, ಘಟನೆ ಹಿಂದೆ ವಾಣಿಜ್ಯ ಸಂಕೀರ್ಣ ಮಾಲಕರ ಕೈವಾಡ ಇದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ತಡರಾತ್ರಿ ವಿಷಯ ತಿಳೀದಾಕ್ಷಣ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ಮತ್ತು ಸಿಬ್ಬಂದಿಗ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.

