ವಿಟ್ಲ ಶ್ರೀ ರಾಮ ಮಂದಿರಕ್ಕೆ ಚಿತ್ರಾಪುರ ಮಠದ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಭೇಟಿ
ವಿಟ್ಲ: ವಿಟ್ಲ ಶ್ರೀರಾಮ ಮಂದಿರಕ್ಕೆ ಶಿರಸಿ ಶಿರಾಲಿ ಚಿತ್ರಾಪುರ ಮಠದ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಭೇಟಿ ನೀಡಿ ಆಶೀರ್ವಚನ ನೀಡಿದರು.
ರಾಧಾಕೃಷ್ಣ ಪೈ ಸ್ವಾಗತಿಸಿದರು. ಸುಭಾಶ್ಚಂದ್ರ ನಾಯಕ್ ವಂದಿಸಿದರು. ನವನೀತ್ ಭಟ್, ಕೊಪ್ಪ ಕೃಷ್ಣ ಪ್ರಸಾದ್ ಶೆಣೈ, ಮುರಳೀಧರ ಭಟ್, ಹರೀಶ್ ನಾಯಕ್, ರಾಧಾಕೃಷ್ಣ ನಾಯಕ್, ನಿತ್ಯಾನಂದ ನಾಯಕ್, ವೆಂಕಟೇಶ ಭಟ್, ರಾಮದಾಸ್ ಶೆಣೈ, ಶ್ರೀಧರ ಭಟ್, ರಾಘವೇಂದ್ರ ಪೈ, ಮೈತ್ರೇಯಿ ಗುರುಕುಲದ ಜಗನ್ನಾಥ ಕಾಸರಗೋಡು, ಜಿ ಎಸ್ ಬಿ ಸಮಾಜ ಬಾಂಧವರು ಹಾಗೂ ಇತರ ಭಕ್ತಾದಿಗಳು ಉಪಸ್ಥಿತರಿದ್ದರು.