ಸ್ವಚ್ಚತೆಯ ಮೂಲಕ ಗ್ರಾಮ ಪಂಚಾಯತ್ ಕಣ್ಣು ತೆರೆಸಿದ ಕಲ್ಲಡ್ಕ ಶೌರ್ಯ ವಿಪತ್ತು ತಂಡ
ಬಂಟ್ವಾಳ: ತಾಲೂಕಿನ ಬೋಳಂತೂರು ಗ್ರಾಮದ ಪೂಪಾಡಿ ಕಲ್ಲು – ನಾರಂಕೋಡಿ ರಸ್ತೆಯಲ್ಲಿ ಬೆಳೆದುನಿಂತ ಗಿಡಗಂಟಿಗಳನ್ನು
ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ಶೌಯ೯ ವಿಪತ್ತು ತಂಡ ಸ್ವಚ್ಚಗೊಳಿಸುವ ಮೂಲಕ ಸ್ಥಳೀಯ ಗ್ರಾಮ ಪಂಚಾಯತ್ ನ ಕಣ್ಣು ತೆರೆಸಿದೆ.

ಕಾಂಕ್ರೀಟ್ ರಸ್ತೆಯ ಸುತ್ತಮುತ್ತಲು ಗಿಡ ಗಂಟಿಗಳು ಬೆಳೆದು ನಿಂತು ಶಾಲಾ ಮಕ್ಕಳು ನಡೆದುಕೊಂಡು ಹೋಗಲು ಭಯಪಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ಹಲವು ಬಾರಿ ಪಂಚಾಯತ್ ಗೆ ಮನವಿ ನೀಡಿದರೂ ಸ್ಪಂದಿಸದಿರುವ ಹಿನ್ನಲೆಯಲ್ಲಿ ಸ್ಥಳೀಯರು ಯೋಜನೆಯ ಕಲ್ಲಡ್ಕ ಶೌಯ೯ ವಿಪತ್ತು ತಂಡದವರಿಗೆ ಮನವಿ ನೀಡಿದ್ದರು.

ತಕ್ಷಣ ಕಾಯ೯ಪ್ರವತ೯ರಾದ ಶೌಯ೯ ತಂಡದವರು ರಸ್ತೆಯ ಎರಡು ಬದಿಯಲ್ಲಿ ಬೆಳೆದ ಗಿಡಗಳನ್ನು ತೆರವುಗೊಳಿಸಿ ಸ್ವಚ್ಚತೆ ಮಾಡಿದರು. ಶೌರ್ಯ ತಂಡದ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಚ್ಛತಾ ಕಾರ್ಯದಲ್ಲಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ ಕೊಳಕೀರು, ಶೌರ್ಯ ವಿಪತ್ತು ತಂಡದ ಅಧ್ಯಕ್ಷ ಮಾಧವ ಸಾಲಿಯಾನ್ ಕುದುರೆಬೆಟ್ಟು, ತಂಡದ ಸಂಯೋಜಕಿ ವಿದ್ಯಾ, ಕಲ್ಲಡ್ಕ ಒಕ್ಕೂಟ ಸೇವಾ ಪ್ರತಿನಿಧಿ ಗಣೇಶ್, ಶೌರ್ಯ ತಂಡದ ಸದಸ್ಯರುಗಳಾದ ವೆಂಕಪ್ಪ ಜಿ, ಮೌರೀಶ್, ರವಿಚಂದ್ರ ಜೋಗಿ, ರಮೇಶ್ ಕುದ್ರೆಬೆಟ್ಟು, ಸಂತೋಷ್ ಬೊಳ್ಪೋಡಿ, ಚಿನ್ನಾ ಕಲ್ಲಡ್ಕ, ಸತೀಶ್ ಮೇಸ್ತ್ರಿ, ಧನಂಜಯ ಕೊಳಕೀರು, ಸ್ಥಳೀಯರಾದ ಹಮೀದ್, ಚರಣ್ ಮೊದಲಾದವರು ಪಾಲ್ಗೊಂಡಿದ್ದರು.