ಜೇನು ಕೃಷಿ ತರಬೇತಿ ಶಿಬಿರ
ಬಂಟ್ವಾಳ: ತೋಟಗಾರಿಕಾ ಇಲಾಖೆ ಮತ್ತು ನರಿಕೊಂಬು, ಬಾಳ್ತಿಲ ಸಂಜೀವಿನಿ ಒಕ್ಕೂಟ ಆಶ್ರಯದಲ್ಲಿ ಮಂಗಳವಾರ ನರಿಕೊಂಬು ಗ್ರಾಮದ ಕೋಡಿ ಎಂಬಲ್ಲಿ ನಡೆದ ಜೇನು ಕೃಷಿ ತರಬೇತಿ ಶಿಬಿರವನ್ನು ಅಂಕಿ ಅಂಶ ಇಲಾಖೆ ನಿವೃತ್ತ ಅಧಿಕಾರಿ ದೇಜಪ್ಪ ಕೋಡಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಬೊಲ್ಪು ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ರಾಜಾ ಬಂಟ್ವಾಳ್, ಉಪನ್ಯಾಸಕ ರಾಧಕೃಷ್ಣ ಬೆಟ್ಟಂಪಾಡಿ, ಕೃಷಿ ಅಧಿಕಾರಿ ಹನುಮಂತ ವಿವಿಧ ಮಾಹಿತಿ ನೀಡಿದರು.
ನರಿಕೊಂಬು, ಬಾಳ್ತಿಲ ಎರಡು ಗ್ರಾ.ಪಂ. ಸದಸ್ಯರು, ಸ್ತ್ರೀಶಕ್ತಿ, ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ತಾಲೂಕು ಸಂಪನ್ಮೂಲ ವ್ಯಕ್ತಿ ಸವಿತಾ ಶಂಭೂರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಪುಸ್ತಕ ಬರಹಗಾರ್ತಿ ರೂಪ ನರಿಕೊಂಬು ವಂದಿಸಿದರು.