ಪಂಪ್‌ವೆಲ್ ನಲ್ಲಿ ನೂತನ ಪ್ರಯಾಗ್ ಸಿಲ್ಕ್ ಮಳಿಗೆ ಶುಭಾರಂಭ
ಮಂಗಳೂರು: ವಿಜಯಲಕ್ಷ್ಮೀ ಸಾರಥ್ಯದಲ್ಲಿ ನೂತನವಾಗಿ ಆರಂಭಗೊಂಡ “ಪ್ರಯಾಗ್ ಸಿಲ್ಕ್” ಮಳಿಗೆಯು ಲಕ್ಶ್ಮೀ ಪೂಜೆಯ ಶುಭ ದಿನದಂದು ಶುಭಾರಂಭಗೊಂಡಿತು.
ಮಂಗಳೂರಿನ ಪಂಪುವೆಲ್ ನಲ್ಲಿ ವಿಶ್ವಾಸ್ ಐಟ್ಸ್ ಗ್ರೌಂಡ್ ಫ್ಲೋರ್ ನಲ್ಲಿ ಶುಭಾರಂಭಗೊಂಡ ಪ್ರಯಾಗ್ ಸಿಲ್ಕ್ ಮಳಿಗೆಯಲ್ಲಿ ನವೆಂಬರ್ 24ರಂದು ಶುಕ್ರವಾರ ಶ್ರೀ ಕ್ಷೇತ್ರ ಪೊಳಲಿ ಅರ್ಚಕ ಅನಂತ್ ಭಟ್ ಅವರು ಪೂಜೆ ನೆರವೇರಿಸಿದರು.
ನೂತನ ಮಳಿಗೆಯನ್ನು ಶ್ರೀಮತಿ ವಸಂತಿ, ಶ್ರೀಮತಿ ರಾಜೀವಿ, ಶ್ರೀಮತಿ ಗುಲಾಬಿ, ವಿಜಯಲಕ್ಷ್ಮೀ ಉದ್ಘಾಟಿಸಿದರು. ಹಿತೇಶ್ ಹಾಗೂ ಹರ್ಷ ನೂತನ ಮಳಿಗೆಯ ಶುಭಾರಂಭದ ಸಲುವಾಗಿ ಶುಭಕೋರಿದರು. ಮನೋಜ್ ಹಾಗೂ ಸಂತೋಷ್ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ತೇಜ್‌ಪಾಲ್, ಶ್ರೀಮತಿ ವಿಜಯಲಕ್ಷ್ಮೀ, ವಸಂತಿ, ಗುಲಾಬಿ, ರಾಜೀವಿ, ಹರಿಶ್ಚಂದ್ರ, ಪ್ರೇಮಲತಾ, ಮನೋಜ್, ಸಂತೋಷ್, ಹಿತೇಶ್, ಹರ್ಷ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಯಾಗ್ ಸಿಲ್ಕ್ ಸಂಸ್ಥೆಗೆ ಭೇಟಿ ನೀಡಲು ವಿಜಯಲಕ್ಷ್ಮೀ ತೇಜ್ ಪಾಲ್ ಕೊಲ್ಯರನ್ನು ಸಂಪರ್ಕಿಸಿ. ಮೋ :+918867714866, 8746038704