ಪ್ರಥಮ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ “ಮಂಗಳೂರು ಟ್ರೋಫಿ-೨೦೨೩”
ಮಂಗಳೂರು: ಗುರು ಗೊಜೋರಿಯೋ ಕರಾಟೆ ಅಕಾಡೆಮಿ ಇಂಡಿಯಾದ ನೇತೃತ್ವದಲ್ಲಿ ನ.26ರಂದು ಭಾನುವಾರ ಮಂಗಳೂರಿನ ಕುದ್ರೋಳಿ ದೇವಸ್ಥಾನದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಪ್ರಥಮ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಡೆಯಲಿರುವುದು.
ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾಟದಲ್ಲಿ ರಾಜ್ಯ ಮಟ್ಟದ ಪ್ರತಿಷ್ಠಿತ ಕರಾಟೆ ತಂಡಗಳು ಭಾಗವಹಿಸಲಿದ್ದು ಸುಮಾರು ಒಂದು ಸಾವಿರ ಕರಾಟೆ ಪಟುಗಳು ನೂರಕ್ಕೂ ಮಿಕ್ಕ ಕರಾಟೆ ತೀರ್ಪುಗಾರರು ಪಾಲ್ಗೊಳ್ಳಲಿದ್ದಾರೆ. ಹಾಗೂ ಹಿರಿಯ ಕರಾಟೆ ಶಿಕ್ಷಕರಿಗೆ ಗೌರವ ಪುರಸ್ಕಾರ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ ವಿಧಾನ ಸಭಾ ಕ್ಷೇತ್ರದ ಸಭಾಪತಿ ಯು.ಟಿ ಖಾದರ್, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ನ್ಯಾಯವಾದಿ ರವಿ ಪ್ರಸನ್ನ ಸಿ.ಕೆ. ಮಂಗಳೂರು, ಎ.ಸಿ.ಪಿ. ಮನೋಜ್ ಕುಮಾರ್ ಪಣಂಬೂರು, ವಿ.ಕೆ. ಸಮೂಹ ಸಂಸ್ಥೆ ಮುಂಬೈನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಕರುಣಾಕರ ಎಂ. ಶೆಟ್ಟಿ ಮದ್ಯಗುತ್ತು, ಉದ್ಯಮಿ ಶ್ರೀಕಾಂತ್ ಪೂಜಾರಿ ಚೇಳ್ಯಾರು, ಸುರೇಶ್ ಶೆಟ್ಟಿ ರಾಜ್ಯಾಧ್ಯಕ್ಷ ಎಚ್.ಎಂ.ಎಸ್. ಮಂಗಳೂರು, ರಾಜ್ಯ ಪ್ರಧಾನ ಕಾಂಗ್ರೆಸ್ ಕಾರ್ಯದರ್ಶಿ ಇನಾಯತ ಆಲಿ, ಪ್ರಕಾಶ್ ನಿಸರ್ಗ ಇಂಜಿನಿಯರಿಂಗ್ ಸುರತ್ಕಲ್, ಅಗರಿ ರಾಘವೇಂದ್ರ ರಾವ್- ಅಗರಿ ಎಂಟರ್‌ಪ್ರೈಸಸ್ ಸುರತ್ಕಲ್, ಗೋವಾ ಉದ್ಯಮಿ ದಿವ್ಯಾ ಗಂಗಾಧರ್, ರಾಜ್ಯ ಕರಾಟೆ ಸಂಘದ ಅಧ್ಯಕ್ಷ ಮೊಹಮ್ಮದ್ ನದೀಮ್ ಮೂಡುಬಿದಿರೆ ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ.