ಬ್ರಹ್ಮರಕೂಟ್ಲು: ಏಕಹಾ ಭಜನಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಬಂಟ್ವಾಳ: ಕಳ್ಳಿಗೆ ಗ್ರಾಮದ ಬ್ರಹ್ಮರಕೊಟ್ಲು ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ ಜ 5 – 8 ರ ವರೆಗೆ ನಡೆಯುವ ಶ್ರೀ ಮೂಕಾಂಬಿಕೆಯ ಪುನರ್ ಬಿಂಬ ಪ್ರತಿಷ್ಠೆ ಹಾಗೂ 52ನೇ ವಾರ್ಷಿಕ ಏಕಹಾ ಭಜನಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಭಜನಾ ಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ನಾಗೇಶ್ ಶೆಟ್ಟಿ ಪೆರಿಯೋಡಿ ಬೀಡು, ಪ್ರ. ಕಾರ್ಯದರ್ಶಿ ಕವಿರಾಜ್ ಚಂದ್ರಿಗೆ, ಕೋಶಾಧಿಕಾರಿ ಯೋಗೀಶ್ ವಿ. ಕೆ ದರಿಬಾಗಿಲು, ಆಡಳಿತ ಸಮಿತಿಯ ಅಧ್ಯಕ್ಷ ನವೀನ್ ಬಂಗೇರ ಪಲ್ಲ, ಪ್ರ ಕಾರ್ಯದರ್ಶಿ ಹೇಮಂತ್ ಸನಿಲ್ ದರಿಬಾಗಿಲು, ಕೋಶಾಧಿಕಾರಿ ಶಿವಪ್ರಸಾದ್ ಬ್ರಹ್ಮರಕೂಟ್ಲು, ಪ್ರಧಾನ ಅರ್ಚಕ ಕೋಟ್ಯಪ್ಪ ಶಾಂತಿ ಕಂಜತ್ತೂರು, ಹಿರಿಯರಾದ ದೂಮಪ್ಪ ದರಿಬಾಗಿಲು, ಸಂಜೀವ ದರಿಬಾಗಿಲು, ಮಿಥಿಲ್ ಸುವರ್ಣ ಪಲ್ಲ, ದಿನಕರ್ ಬ್ರಹ್ಮರಕೂಟ್ಲು, ಮನೋಹರ್ ಕುಲಾಲ್ ಪುಡಿಕೇಲ್ಲಾಯಕೋಡಿ, ರಂಜನ್ ದರಿಬಾಗಿಲು, ಸಂತೋಷ್ ದರಿಬಾಗಿಲು, ಯಶೋಧರ್ ಪೆತ್ತಮೊಗರು, ವಿಶ್ವನಾಥ್ ಪೆತ್ತಮೊಗರು, ಗಿರೀಶ್ ದರಿಬಾಗಿಲು, ದೀಕ್ಷಿತ್ ಗುಂಡಿ, ಪ್ರಕಾಶ್ ಪಲ್ಲ, ಸಂತೋಷ್ ಕುಮಾರ್ ದರಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು.