ಕಲ್ಲಡ್ಕ ವಲಯದ ಶೌಯ೯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಅನಾರೋಗ್ಯ ಪೀಡಿತರಿಗೆ ಸಾಮಾಗ್ರಿ ವಿತರಣೆ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯದ ಶೌಯ೯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಅನಾರೋಗ್ಯ ಪೀಡಿತರಾಗಿರುವ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಮಾಜಿ ಅಧ್ಯಕ್ಷ ಮುರಬೈಲು ಈಶ್ವರ ನಾಯ್ಕ ರವರಿಗೆ ವಿಪತ್ತು ನಿರ್ವಹಣಾ ಸದಸ್ಯರು ಮಾಡಿದ ಕೆಲಸಗಳಿಗೆ ಯೋಜನೆಯಿಂದ ಸಿಗುವ ಗೌರವಧನವನ್ನು ಒಟ್ಟು ಸೇರಿಸಿ 50 ಕೆ.ಜಿ ಅಕ್ಕಿ ಹಾಗೂ ದಿನಸಿ ಸಾಮಾನು, ತರಕಾರಿ, ಫಲವಸ್ತು, ತಿಂಡಿ ತಿನಸುಗಳನ್ನು ನೀಡಿ ಆರೋಗ್ಯವನ್ನು ವಿಚಾರಿಸಿದರು.

ಈ ಕಾರ್ಯದಲ್ಲಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಗೋಳ್ತ ಮಜಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಕೊಟ್ಟಾರಿ, ಕಲ್ಲಡ್ಕ ವಲಯ ವಿಪತ್ತು ನಿರ್ವಹಣಾ ತಂಡದ ಅಧ್ಯಕ್ಷ ಮಾಧವ ಸಾಲ್ಯಾನ್, ಸಂಯೋಜಕಿ ವಿದ್ಯಾ, ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ಶೌರ್ಯ ತಂಡದ ಸದಸ್ಯೆ ತುಳಸಿ ಕೊಳಕೀರು, ತಂಡದ ಸದಸ್ಯರುಗಳಾದ ಗಣೇಶ್ ನೆಟ್ಲಾ, ಚಿನ್ನಾ ಕಲ್ಲಡ್ಕ, ವೆಂಕಪ್ಪ, ರಮೇಶ್ ಕುದ್ರೆಬೆಟ್ಟು, ಧನಂಜಯ, ಮೌರೀಶ್, ಯೋಜನೆಯ ಗೋಳ್ತಮಜಲು ಒಕ್ಕೂಟದ ಸೇವಾ ಪ್ರತಿನಿಧಿ ಜಯಶ್ರೀ ಮೊದಲಾದವರು ಭಾಗವಹಿಸಿದರು.