ನೂತನ ಶಿಲಾಮಯ ಶ್ರೀ ಆಂಜನೇಯ ದೇವಸ್ಥಾನದ ಸಮಾಲೋಚನಾ ಸಭೆ, ಬ್ರಹ್ಮಕಲಶ ಸಮಿತಿ ರಚನೆ, ಅಧ್ಯಕ್ಷರಾಗಿ ಭುವನೇಶ್ ಪಚ್ಚಿನಡ್ಕ ಆಯ್ಕೆ
ಬಂಟ್ವಾಳ: ಫರಂಗಿಪೇಟೆ ವಿಜಯ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶಿಲಾಮಯ ಶ್ರೀ ಆಂಜನೇಯ ದೇವಸ್ಥಾನದ ಬ್ರಹ್ಮಕಲಶ ಶ್ರೀ ಆಂಜನೇಯ ದೇವರ ಹಾಗೂ ಗಣಪತಿ ದೇವರ ಪ್ರತಿಷ್ಠಾಪನೆಯ ಕಾರ್ಯಕ್ರಮವು ಜನವರಿ ೨೧ರಿಂದ ೨೬ ರ ತನಕ ನಡೆಯಲಿದ್ದು ಪೂರ್ವಾಭಾವಿಯಾಗಿ ಪುದು, ತುಂಬೆ, ಕಳ್ಳಿ ಗೆ, ಕೊಡ್ಮನ್, ಮೇರಮಜಲು, ಅರ್ಕುಳ ಗ್ರಾಮಗಳನ್ನೊಳಗೊಂಡ ೬ ಗ್ರಾಮಗಳ ಭಕ್ತರ ಸಮಾಲೋಚನಾ ಸಭೆ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆಯು ನ.೬ರಂದು ಆದಿತ್ಯವಾರ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ವಠಾರದಲ್ಲಿ ನಡೆಯಿತು.
ಅರ್ಕುಳ ಬೀಡು ವಜ್ರನಾಭ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾವೇದಿಕೆಯಲ್ಲಿ, ದೇಗುಲ ನಿರ್ಮಾಣ ಸಮಿತಿಯ ಗೌರವ ಅಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಅಧ್ಯಕ್ಷ ಅಜಿತ್ ಚೌಟ, ಕಾರ್ಯಾಧ್ಯಕ್ಷ ಮಹಾಬಲ ಕೊಟ್ಟಾರಿ ಮುನ್ನೂರು, ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ , ಸಂಚಾಲಕರಾದ ವಿಠ್ಠಲ್ ಆಳ್ವ ಗರೋಡಿ, ಡಾ ರವೀಶ್ ತುಂಗಾ, ಅರ್ಕುಳ ಕಂಪ ಸದಾನಂದ ಆಳ್ವ, ವೀರಾಂಜನೇಯ ವ್ಯಾಯಾಮ ಶಾಲೆ ಅದ್ಯಕ್ಷ ಚಂದ್ರಶೇಖರ ಗಂಭೀರ, ಶಿಕ್ಷಕ ಪ್ರಭಾಕರ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ಧರು.
ನೂತನ ಶಿಲಾಮಯ ಶ್ರೀ ಆಂಜನೇಯ ದೇವಸ್ಥಾನದ ಬ್ರಹ್ಮಕಲಶ ಸಮಿತಿಗೆ ಪದಾಧಿಕಾರಿಗಳ ಆಯ್ಕೆ,
ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಮತ್ತು ಡಾ ರವೀಶ್ ತುಂಗಾ, ಗೌರವಾಧ್ಯಕ್ಷರಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಭುವನೇಶ ಪಚ್ಚಿನಡ್ಕ ಸರ್ವಾನುಮತದಿಂದ ಆಯ್ಕೆಯಾದರು.
ಪ್ರಧಾನ ಸಂಚಾಲಕರಾಗಿ ದೇವಸ್ಯ ಪ್ರಕಾಶ್ ಚಂದ್ರ ರೈ, ಕಾರ್ಯಧ್ಯಕ್ಷರಾಗಿ ಅರ್ಕುಳ ಕಂಪ ಸದಾನಂದ ಆಳ್ವ ಮತ್ತು ತೇವು ತಾರಾನಾಥ ಕೊಟ್ಟಾರಿ, ಪ್ರದಾನ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಉಮೇಶ್ ಸಾಲ್ಯಾನ್ ಬೆಂಜನಪದವು ಆಯ್ಕೆಯಾದರು ಹಾಗೂ ಉಪಸಮಿತಿಗಳನ್ನು ರಚಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು, ತೇವು ತಾರಾನಾಥ ಕೊಟ್ಟಾರಿ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಿಕೊಟ್ಟರು, ಕರುಣಾಕರ ಕೊಟ್ಟಾರಿ ಸ್ವಾಗತಿಸಿ, ಕವಿತಾ ದೇವದಾಸ ವಂದಿಸಿದರು, ಜಗದೀಶ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು.