ಇರ್ವತ್ತೂರು : ಆಧಾರ್ ತಿದ್ದುಪಡಿ ಮತ್ತು ಪರಿಷ್ಕರಣಾ ಶಿಬಿರ
ಬಂಟ್ವಾಳ :ತಾಲೂಕಿನ ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ ಇದರ ವತಿಯಿಂದ ಅಂಚೆ ಇಲಾಖೆ ಪುತ್ತೂರು ವಿಭಾಗ ಸಹಕಾರದಲ್ಲಿ ಆಧಾರ್ ತಿದ್ದುಪಡಿ ಮತ್ತು ಪರಿಷ್ಕರಣಾ ಶಿಬಿರ ಅಂಚೆ ಸಂಪರ್ಕ ಅಭಿಯಾನ ಮೂಡುಪಡುಕೋಡಿ ಸ.ಹಿ.ಪ್ರಾ. ಶಾಲಾ ವಠಾರದಲ್ಲಿ ನಡೆಯಿತು.

ಅಂಚೆ ಇಲಾಖೆಯ ಪುತ್ತೂರು ವಿಭಾಗದ ಅಂಚೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗುರುಪ್ರಸಾದ್ ಕೆ.ಎಸ್. ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇರ್ವತ್ತೂರು ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎಸ್.ಮೂಡಾಯಿಮಠ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಂಟ್ವಾಳ ತಾ. ಯೋಜನಾಧಿಕಾರಿ ಮಾಧವಗೌಡ, ನಿವೃತ್ತ ಅಂಚೆಪಾಲಕ ವೆಂಕಪ್ಪ ಮೂಲ್ಯ ಬಂಗೇರೆಕೆರೆ, ವಾಮದಪದವು ಸ.ಪ್ರೌ.ಶಾಲೆಯ ಚಿತ್ರಕಲಾ ಅಧ್ಯಾಪಕ ಮುರಳಿಕೃಷ್ಣ ರಾವ್ ಕೆ., ವಾಮದಪದವು ವ್ಯ.ಸೇ.ಸ.ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಲ್ಪರ್ಟ್ ಡಿ.ಸೋಜಾ, ಅಂಚೆ ಇಲಾಖೆಯ ಸಿಬಂದಿಗಳಾದ ನೂತನ್ ಬಂಗೇರ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುರೇಶ್ ಕಯ್ಯಬೆ,ಶಾಲಾ ಮುಖ್ಯ ಶಿಕ್ಷಕಿ ಐರಿನ್ ಮಿರಾಂದ, ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಡಾ.ರಾಮಕೃಷ್ಣ ಎಸ್.,ಪದಾಧಿಕಾರಿಗಳಾದ ದಯಾನಂದ ಎರ್ಮೆನಾಡು, ಗಣೇಶ್ ಶೆಟ್ಟಿ ಸೇವಾ,ವೀರೇಂದ್ರ ಹಲೆಪ್ಪಾಡಿ,ಪದ್ಮನಾಭ ಗೌಡ.ಸುಪ್ರಿತ್ ಜೈನ್ ಎಡ್ತೂರು,ಹರೀಶ್ ಪೂಜಾರಿ ಎರ್ಮೆನಾಡು, ಚಂದ್ರಹಾಸ ಎರ್ಮೆನಾಡು, ಸುಂದರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಅಂಚೆ ಇಲಾಖೆಯ ಸಿಬಂದಿಗಳನ್ನು ಗೌರವಿಸಲಾಯಿತು.