ವಗ್ಗ ಬಿಲ್ಲವ ಸಮಾಜ ಸೇವಾ ಸಂಘದಿಂದ ನಾರಾಯಣ ಗುರು ಜಯಂತಿ ಆಚರಣೆ
ಬಂಟ್ವಾಳ: ತಾಲೂಕಿನ ವಗ್ಗ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಬಿಲ್ಲವ ಮಹಿಳಾ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುವರ್ಯರ ೧೬೯ ನೇ ಜನ್ಮಾದಿನಾಚರಣೆಯ ಪ್ರಯುಕ್ತ “ಬೈದಶ್ರೀ ಕ್ರೀಡೋತ್ಸವ” ಹಾಗೂ ಗುರು ಪೂಜಾ ಮಹೋತ್ಸವ ಕಾರ್ಯಕ್ರಮವು ವಗ್ಗ , ಕಾಡಬೆಟ್ಟು ಶ್ರೀ ಶಾರದಾಂಬಾ ಭಜನ ಮಂದಿರದಲ್ಲಿ ಜರಗಿತು.

ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷರಾದ ಸಂಜೀವ ಪೂಜಾರಿ ಬಿ.ಸಿ. ರೋಡ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಿಲ್ಲವ ಸಮಾಜ ಎಲ್ಲಾ ಜನರೊಂದಿಗೆ ಸಾಮರಸ್ಯದಿಂದ ಬೆರೆತು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಬಂಟ್ವಾಳ ತಾಲೂಕು ಕಚೇರಿ ಉಪ ತಹಶೀಲ್ದಾರ್ ಕೆ.ನವೀನ ಬೆಂಜನಪದವು ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ನೀಡಿದರು. ಬಿಲ್ಲವ ಸಮಾಜ ಸೇವಾ ಸಂಘ ಕಾವಳಪಡೂರು ಇದರ ಅಧ್ಯಕ್ಷ ವೀರೇಂದ್ರ ಬಿ. ಅಮೀನ್ ಅವರು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮುಲ್ಕಿ ಇದರ ವಕ್ತಾರರಾದ ಬೇಬಿ ಕುಂದರ್, ಪ್ರಮುಖರಾದ ವೆಂಕಟೇಶ್ ಬೆಂಗಳೂರು, ಪ್ರವೀಣ್ ಪೂಜಾರಿ ಪಡಂತರಬೆಟ್ಟು, ಚಂದ್ರಶೇಖರ ಮಧ್ವ, ಪೂರ್ಣಿಮಾ ಕಾಡಬೆಟ್ಟು ಮತ್ತಿತರರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ೨೦೨೨-೨೩ ನೇ ಸಾಲಿನ ಎಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇಕಡ ೯೦ ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸಲಾಯಿತು ಹಾಗೂ ಸಾಧಕ ಯುವ ಪ್ರತಿಭೆಗಳನ್ನು ಸಮ್ಮಾನಿಸಲಾಯಿತು. ಕ್ರೀಡಾ ಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಮಧ್ವ ಬರ್ಕಟದಿಂದ ಕಾಡಬೆಟ್ಟು ಭಜನಾ ಮಂದಿರದವರೆಗೆ ವಾಹನ ಜಾಥ ನಡೆಯಿತು.ವಸಂತ ಶಾಂತಿ ಅವರ ಪೌರೋಹಿತ್ಯದಲ್ಲಿ ಗುರುಪೂಜೆ ನಡೆಯಿತು.
ಧನುಷ್ ಪೂಜಾರಿ ಮಧ್ವ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಮಧುಸೂಧನ್ ಪೂಜಾರಿ ಮಧ್ವ ಕ್ರೀಡಾಕೂಟದ ವಿಜೇತರ ವಿವರ ನೀಡಿದರು. ಶಿವರಾಜ್ ಗಟ್ಟಿ ರಾಮೊಟ್ಟು ಮತ್ತು ಪ್ರಶಾಂತ್ ಕುದ್ಯಾಡಿ ವಗ್ಗ ಅವರು ಕಾರ್ಯಕ್ರಮ ನಿರೂಪಿಸಿದರು.