ಅನರ್ಘ್ಯ ಎ.ಆರ್ ಎಸ್ ಜಿ ಎಫ್ ಐ ಸ್ಪರ್ಧೆಗೆ ಆಯ್ಕೆ
ಬಂಟ್ವಾಳ: ಬೆಂಗಳೂರಿನ ಬನಶಂಕರಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಈಜು ಕೊಳದಲ್ಲಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ, ನವ ದೆಹಲಿ ಇವರ ಆಶ್ರಯದಲ್ಲಿ ನಡೆದ 34ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ 14 ರ ವಯೋಮಾನದ ಹುಡುಗಿಯರ. 200 ಮೀಟರ್ ಬಟರ್ ಫ್ಲೈ ಯಲ್ಲಿ ಪ್ರಥಮ ಸ್ಥಾನ ಪಡೆದ ಕಲ್ಲಡ್ಕ ಶ್ರೀರಾಮ ಫ್ರೌಢ ಶಾಲೆಯ 8 ನೇ ಏಕಲವ್ಯದ ಅನರ್ಘ್ಯ ಎ.ಆರ್. ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ( ಎಸ್ ಜಿ ಎಫ್ ಐ) ಸ್ಫರ್ದೆಗೆ ಆಯ್ಕೆಯಾಗಿದ್ದಾರೆ.
ಇವರು ಮಂಗಳೂರಿನ ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ ಪೆಕ್ಟರ್ ಬಿ.ಕೆ ನಾಯ್ಕ್ ಇವರ ಶಿಷ್ಯೆಯಾಗಿದ್ದು, ವಿ ವನ್ ಈಜು ತರಬೇತಿ ಕೇಂದ್ರದ ಮುಖ್ಯ ತರಬೇತುದಾರರಾದ ಲೋಕರಾಜ್ ವಿಟ್ಲ ಮತ್ತು ಸ್ಯಾಂಜು ರವರಿಂದ ತರಬೇತಿ ಪಡೆದಿರುತ್ತಾರೆ.