ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ಅ.೨೨ ಭಾನುವಾರ ನವರಾತ್ರಿಯ ದಿನದಂದು ಮಹಾನವಮಿಯ ಪ್ರಯುಕ್ತ ಮಧ್ಯಾಹ್ನ ದೇವಳದ ವತಿಯಿಂದ ಚಂಡಿಕಾಹೋಮ ನಡೆಯಿತು. ರಾತ್ರಿ ೮:೦೦ ಗಂಟೆಗೆ ನವರಾತ್ರಿ ಪೂಜೆ ನಡೆಯಲಿರುವುದು.

ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರರಾದ ಯು. ತಾರಾನಾಥ ಆಳ್ವ, ಚೇರ ಸೂರ್ಯ ನಾರಾಯಣ ರಾವ್, ಪವಿತ್ರಪಾಣಿ ಮಾಧವ ಭಟ್, ಅರ್ಚಕರಾದ ಕೆ. ರಾಮ್ ಭಟ್, ನಾರಾಯಣ ಭಟ್, ಪರಮೇಶ್ವರ್ ಭಟ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಇದ್ದರು.

ಸಂಜೆ ಗಂಟೆ ೬:೩೦ರಿಂದ ನವರಾತ್ರಿ ವೇಷಗಳ ಸಂಭ್ರಮ ನಡೆಯಲಿದೆ.

By suddi9

Leave a Reply

Your email address will not be published. Required fields are marked *