ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ನವರಾತ್ರಿ ವೇಷಗಳ ಸಂಭ್ರಮ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ನವರಾತ್ರಿ ಉತ್ಸವ ಅ.೨೨ ಭಾನುವಾರದಂದು ಮಹಾನವಮಿಯ ಪ್ರಯುಕ್ತ ಮಧ್ಯಾಹ್ನ ದೇವಳದ ವತಿಯಿಂದ ಚಂಡಿಕಾಹೋಮ ಹಾಗೂ ರಾತ್ರಿ ೮:೦೦ ಗಂಟೆಗೆ ನವರಾತ್ರಿ ಪೂಜೆ ನಡೆಯಿತು.

ಸಂಜೆ ಗಂಟೆ ೬:೩೦ರಿಂದ ನವರಾತ್ರಿ ವೇಷಗಳ ಸಂಭ್ರಮ ಕಾರ್ಯಕ್ರಮ ನಡೆಯಿತು. ಇದರಲ್ಲಿ ಹಲವಾರು ತಂಡಗಳು ಭಾಗವಹಿಸಿ ವೇಷಗಳ ನರ್ತನ ಪ್ರದರ್ಶನ ಭರದಿಂದ ಸಾಗಿತ್ತು.

ನೆರೆದಿದ್ದ ಜನರು ಸಂತೋಷದಿಂದ ಕೈ ಚಪ್ಪಾಳೆಯೊಂದಿಗೆ ತಂಡಗಳನ್ನು ಪ್ರೋತ್ಸಾಹಿಸಿದರು.



