ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವ
ಪೊಳಲಿ: ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಓಂಭತ್ತು ದಿನಗಳ ಕಾಲ ನಡೆಯುವ ನವರಾತ್ರಿ ಮಹೋತ್ಸವವು ಅ.೧೫ ರಿಂದ ೨೨ನೇ ಭಾನುವಾರದ ವರೆಗೆ ನಡೆಯಲಿರುವುದು.
ನವರಾತ್ರಿ ಮಹೋತ್ಸವದ ಸಾಂಸ್ಖೃತಿಕ ಕಾರ್ಯಕ್ರಮಗಳು:
ಅ.೧೪ರಂದು ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೊಡುವಿಕೆಯಿಂದ “ನಳಿನಾಕ್ಷಿ ನಂದನೆ-ಅಂಬಾಶಪಥ” ಯಕ್ಷಗಾನ ಬಯಲಾಟ,ಭಾನುವಾರ ಸಂಜೆ ೬:೦೦ರಿಂದ ೮:೦೦ರ ತನಕ ನೃತ್ಯ ಸುಧಾ(ರಿ) ವಿದುಷಿ ಸುಧೀಂದ್ರ ರಾವ್ ಇವರ ಶಿಷ್ಯೆಯರಿಂದ “ನೃತ್ಯಾರ್ಪಣಂ“,ರಾತ್ರಿ ೮:೦೦ರಿಂದ ೧೦:೦೦ರ ತನಕ ಶ್ರೀ ಪೊಳಲಿ ಡ್ಯಾನ್ಸ್ ಅಕಾಡೆಮಿ ಪುಂಚಮೆ ಇವರ ಕಡೆಯಿಂದ “ನೃತ್ಯ ವೈಭವ” ಕಾರ್ಯಕ್ರಮ,ಸೋಮವಾರದಂದು ಸಂಜೆ ೪:೦೦ರಿಂದ ೬:೦೦ರ ತನಕ ಯಕ್ಷ ಮಂಜುಳಾ ಕದ್ರಿ,ಮಂಗಳೂರು ಬಳಗದವರಿಂದ ಮಹಿಳಾ ಯಕ್ಷಗಾನ ತಾಳಮದ್ದಳೆ “ಇಂದ್ರಜಿತು ಕಾಳಗ“,ರಾತ್ರಿ ೬:೦೦ರಿಂದ ೯:೦೦ರ ತನಕ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ (ತೆಂಕು-ಬಡಗು)”ಯಕ್ಷಗಾನ ಸ್ವರಾಭಿಷೇಕ“,ಮಂಗಳವಾರ ಸಂಜೆ ೬:೦೦ರಿಂದ ೧೦:೦೦ರ ತನಕ ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ(ರಿ),ಇವರಿಂದ “ಕಾರ್ತವೀರ್ಯಾರ್ಜುನ ಕಾಳಗ” ಯಕ್ಷಗಾನ ಬಯಲಾಟ,ಬುಧವಾರದಂದು ಮೈಸೂರು ಶ್ರೀ ರಾಮಚಂದ್ರ ಆಚಾರ್ಯ ಇವರಿಂದ “ದಾಸವಾಣಿ“,ರಾತ್ರಿ ೯:೦೦ರಿಂದ ೧೦:೩೦ರ ತನಕ ಭರತನಾಟ್ಯ,ಲಘುಶಾಸ್ತ್ರೀಯ ಹಾಗೂ ಜಾನಪದ ನೃತ್ಯಗಳ ಸಂಗಮ “ನೃತ್ಯಾರ್ಪಣಂ“,ಗುರುವಾರದಂದು ಸಂಜೆ ೬:೦೦ರಿಂದ ೮:೦೦ರ ತನಕ ಯಶಸ್ವಿನಿ ಉಳ್ಳಾಲ್ ಸ್ವರ ಮಾಧುರ್ಯ ಸಂಗೀತ ವಿದ್ಯಾಲಯ ಇವರಿಂದ “ದಾಸ ಕೀರ್ತನೆ,ಭಕ್ತಿ ಗಾಯನ“,ರಾತ್ರಿ ೮:೦೦ರಿಂದ ೧೦:೦೦ರ ತನಕ ವಿದ್ವಾನ್ ಗಣರಾಜ್ ಭಟ್ ಬಂಟ್ವಾಳ ಮತ್ತು ಬಳಗದವರಿಂದ “ಶಾಸ್ತ್ರೀಯ ಸಂಗೀತ“,ಶುಕ್ರವಾರದಂದು ಸಂಜೆ ೬:೦೦ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೊಡುವಿಕೆಯಿಂದ “ವೀರ ವೈಷ್ಣವಿ” ಎಂಬ ಯಕ್ಷಗಾನ ತಾಳಮದ್ದಳೆ,ಶನಿವಾರದಂದು ಸಂಜೆ ೫:೦೦ರಿಂದ ೬:೦೦ರ ತನಕ ಪ್ರಸಿದ್ಧ ಅಭಿನೇತ್ರಿ ವಿದುಷಿ ಅಯನಾ ಪೆರ್ಲ ಇವರಿಂದ “ಶಾಸ್ತ್ರೀಯ ಭರತನಾಟ್ಯ“,ಸಂಜೆ ೬:೦೦ರಿಂದ ೮:೦೦ರ ತನಕ ಈಶ್ವರದಾಸ್ ಕೊಪ್ಪೇಸರ ಇವರಿಂದ ಹರಿ ಕಥಾ ಕಾಲಕ್ಷೇಪ “ವಿಧುರ ಆತಿಥ್ಯ“,ರಾತ್ರಿ ೮:೦೦ರಿಂದ ೧೦:೦೦ರ ತನಕ ರಾಮಕೃಷ್ಣ ತಪೋವನ ಪೊಳಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಬಿ.ಮೋಹನ್ ಕುಮಾರ್ ಅಮ್ಮುಂಜೆ ನಿರ್ದೇಶನದ “ಷಣ್ಮುಖ ವಿಜಯ ಮತ್ತು ರತಿ ಕಲ್ಯಾಣ” ಯಕ್ಷಗಾನ ಬಯಲಾಟ,ಭಾನುವಾರದಂದು ಸಂಜೆ ೬:೩೦ರಿಂದ ನವರಾತ್ರಿ ವೇಷಗಳ ಸಂಭ್ರಮ.
ನವರಾತ್ರಿಯ ಒಂಭತ್ತು ದಿನವೂ ಭಕ್ತಾದಿಗಳಿಂದ ಚಂಡಿಕಾಹೋಮ
ಅ.೧೫ ರಂದು ರಂಗನಾಥ ಭಟ್ ಗಂದಾಡಿ ಅವರಿಂದ ಚಂಡಿಕಾಹೋಮ
ಅ.೧೬ ರಂದು ಭುವನೇಶ್ ಪಚಿನಡ್ಕ ಅವರಿಂದ ಚಂಡಿಕಾಹೋಮ
ಅ.೧೭ ರಂದು ರಾಜೇಶ್ ನಾಯ್ಕ್ ಅವರಿಂದ ಚಂಡಿಕಾಹೋಮ
ಅ.೧೮ ರಂದು ಸುದೇಶ್ ರೈ ಅವರಿಂದ ಚಂಡಿಕಾಹೋಮ
ಅ.೧೯ ರಂದು ರವಿ ಕುಮಾರ್ ರಾವ್ ಮುಂಬೈ ಅವರಿಂದ ಚಂಡಿಕಾಹೋಮ
ಅ.೨೦ ರಂದು ಚಂದ್ರಶೇಖರ ದೇವಾಡಿಗ ಪೊಳಲಿ
ಅ.೨೧ ರಂದು ಗಣೇಶ್ ಶೆಟ್ಟಿ ಪರಾರಿ
ಅ.೨೨ ರಂದು ಮಹಾನವಮಿ ಪ್ರಯುಕ್ತ ದೇವಾಲಯದ ವತಿಯಿಂದ ಚಂಡಿಕಾಹೋಮ
ಪ್ರತಿನಿತ್ಯ ರಾತ್ರಿ ೮:೦೦ಗಂಟೆಗೆ ನವರಾತ್ರಿ ಪೂಜೆ ನಡೆಯಲಿದೆ.
ವಿಶೇಷ: ಅ.೧೯ರಂದು ಗುರುವಾರ ರಾತ್ರಿ ಗಂಟೆ ೮:೦೦ರಿಂದ ೧೦:ರ ವರೆಗೆ “ಲಲಿತಾ ಪಂಚಮಿ“ಯ ದಿನದಂದು ಶ್ರೀ ದೇವರಿಗೆ ಹರಕೆಯಾಗಿ ಬಂದ ಸೀರೆಯನ್ನು ೧೮ ವರ್ಷ ಮೇಲ್ಪಟ್ಟ ಸ್ತ್ರೀಯರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುವುದು.