ಬಾವಲಿಗುಳಿಯಲ್ಲಿ 9ನೇ ವರ್ಷದ ಗಣೇಶೋತ್ಸವ, ಕರ್ನಾಟಕ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಸೇರಿದಂತೆ ಸಾಧಕರಿಗೆ ಸನ್ಮಾನ
ಉಳ್ಳಾಲ: ವರ್ಕಾಡಿ ಬಾವಲಿಗುಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 9ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಮಂಗಳವಾರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಸಮಿತಿಯ ಅಧ್ಯಕ್ಷ ವಿಶ್ವನಾಥ ರೈ ಅಡ್ಕ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಸಭಾಧ್ಯಕ್ಷ ಸನ್ಮಾನ್ಯ ಯು. ಟಿ. ಖಾದರ್ ಶುಭ ಹಾರೈಸಿದರು. ಬಳಿಕ ಸಭಾಪತಿಗಳಾಗಿ ಆಯ್ಕೆಯಾಗಿರುವುದಕ್ಕೆ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ನರಿಂಗಾನ ಬೋಳ ಚರ್ಚಿನ ಧರ್ಮ ಗುರುಗಳಾದ ಫೆಡ್ರೀಕ್ ಕೊರೊಯ , ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ ಪ್ರಶಾಂತ ಕಾಜವ ಮಿತ್ತಕೋಡಿ, ಐತಪ್ಪ ಶೆಟ್ಟಿ ದೇವೇಂದಪಡ್ಪು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗಣೇಶ ಉತ್ಸವ ನಡೆಯುವ ಸ್ಥಳದಾನಿ ಗಣೇಶ್ ಚೇಂಡೇಲ್ ದಂಪತಿ, ಸಮಾಜಸೇವಕ ದಾಮೋದರ್ ನಾಯರ್, ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ನವಾಝ್ ನರಿಂಗಾನ, ಉತ್ಸವ ಸಮಿತಿಯ ಮಹಾಪೋಷಕರಾದ ಮನೋಹರ ಶೆಟ್ಟಿ ಗುಮ್ಮೇಗುಳಿ ಜಯಪ್ರಕಾಶ್ ಶೆಟ್ಟಿ ಭಂಡಾರ ಮನೆ, ಪ್ರೇಮಾನಂದ ರೈ ನೆತ್ತಿಲ ಹಾಗೂ ಹರೀಶ್ ಕನ್ನಿಗುಳಿ ಅವರನ್ನು ಸನ್ಮಾನಿಸಲಾಯಿತು.
ಸಮಿತಿಯ ಗೌರವ್ಯಾಧ್ಯಕ್ಷರಾದ ಲಕ್ಷ್ಮೀನಾರಾಯಣ ಹೊಳ್ಳ ಸ್ವಾಗತಿಸಿದರು. ಕೋಶಾಧಿಕಾರಿ ರವಿ ಮುಡಿಮಾರು ಸನ್ಮಾನಪತ್ರ ವಾಚಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಪ್ರಯುಕ್ತ ವಿವಿಧ ತಂಡದಿಂದ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮ ನಡೆಯಿತು.ನಂತರ ಮಹಾಗಣಪತಿಯ ವಿಸರ್ಜನಾ ಪೂಜೆ ನಡೆದು ಭವ್ಯ ಶೋಭಯಾತ್ರೆಯು ಕೆದಂಬಾಡಿ- ನೆತ್ತಿಲಪದವು -ಬಾವಳಿಗುಳಿ- ತೌಡುಗೋಳಿ ರಸ್ತೆಯಾಗಿ ಶಾಂತಿಪಳಿಕೆ ಭಂಡಾರಮನೆಯ ಸಮೀಪದ ದೇವರಕೆರೆಯಲ್ಲಿ ವಿಸರ್ಜಿಸಲಾಯಿತು.