ರೆಂಜೆದಡಿ12 ನೇ ವರ್ಷದ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ
ತಲಪಾಡಿ: ರೆಂಜೆದಡಿ, ತಚ್ಚಾಣಿ, ನಾಗಬನ ಫ್ರೆಂಡ್ಸ್ ಸರ್ಕಲ್ (ರಿ.)12 ನೇ ವರ್ಷದ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದಸತೀಶ್ ಕುಂಪಲ ರವರು ಭಾಗವಹಿಸಿ ಸಭಾ ವೇದಿಕೆಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪುಷ್ಪಾವತಿ ಶೆಟ್ಟಿ, ಈಶ್ವರ ಮಾಸ್ಟರ್ ಕಿದೂರು, ಭಾರತೀಯ ಸೇನೆ ಯೋಧರಾದ ಅನುಗಣಪತಿ, ಕೇಶವ ಶಿಶುಮಂದರದ ಪ್ರಮುಖರಾದ ನಾರಾಯಣ ಕಜೆ, ಬಿಜೆಪಿ ಮುಖಂಡರಾದ ನಿತ್ಯಾನಂದ ಭಂಡಾರಿ ಸಾಂತ್ಯ, ಕುಂಪಲ ಆಸರೆ ಬಳಗದ ಅಧ್ಯಕ್ಷರಾದ ಸಾಗರ್ ಕುಂಪಲ, ನಿವೃತ್ತ ಪೊಲೀಸ್ ಅಧಿಕಾರಿಯಾದ ರಾಜು ಬೆಲ್ಚಾಡ, ವಕೀಲರಾದ ಶ್ರೀಮತಿ ಅನುಷಾ ಅಡ್ಯಂತಾಯ, ತಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶೈಲೇಶ್ ಶೆಟ್ಟಿ ದೇವಿಪುರ ಹಾಗೂ ತಲಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ತಚ್ಚಾಣಿ ಉಪಸ್ಥಿತರಿದ್ದರು.